Wednesday, 15 September 2021

ದೇವಾಲಯಗಳ ತೆರವಿಗೆ ಬಿಜೆಪಿ ಪಕ್ಷ ನೇರ ಕಾರಣ: ವಿಶ್ವ ಹಿಂದೂಪರಿಷತ್ ಆರೋಪ


 ದೇವಾಲಯಗಳ ತೆರವಿಗೆ ಬಿಜೆಪಿ ಪಕ್ಷ ನೇರ ಕಾರಣ: ವಿಶ್ವ ಹಿಂದೂಪರಿಷತ್ ಆರೋಪ

ಮೈಸೂರು: 'ಹಿಂದೂ ದೇವಾಲಯಗಳನ್ನು ಹೊಡೆಯುತ್ತಿರುವುದಕ್ಕೆ ಬಿಜೆಪಿ ಪಕ್ಷ ನೇರಕಾರಣವಾಗಿದೆ ಎಂದು' ವಿಶ್ವ ಹಿಂದೂಪರಿಷತ್ ರಾಜನನಜ್ಯ ಕಾರ್ಯದರ್ಶಿ ಬಸವರಾಜ್ ಆರೋಪಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ,  ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವ ಪಕ್ಷಗಳು ಮಾಡಿದರು ಅದನ್ನು ಸಹಿಸಲು ಸಾಧ್ಯವಿಲ್ಲ' ಎಂದು ಹೇಳಿದರು.

ಸುಪ್ರೀಂಕೋಟ್೯  ಆದೇಶದಂತೆ ಸಾರ್ವಜನಿಕ  ಸ್ಥಳಗಳಲ್ಲಿ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ, ಚರ್ಚೆ, ಮಸೀದಿ, ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ ಸ್ಥಳಾಂತರಿಸುವ ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವ ಹಿಂದೂಪರಿಷತ್ ಗೌರವಿಸುತ್ತದೆ. ಆದರೆ ಸುಪ್ರೀಂಕೋಟ್೯ ಆದೇಶವನ್ನು ಸರ್ಕಾರವೂ ಪ್ರತಿಯೊಂದು ಶ್ರದ್ಧಾಕೇಂದ್ರದ ಬಗ್ಗೆ ಪ್ರತ್ಯೇಕವಾಗಿ ವಿಮರ್ಶೆಮಾಡಿ ಸಕ್ರಮ, ಸ್ಥಳಾಂತರ, ಅನಿವಾರ್ಯವಿದ್ದಾಗ ಮಾತ್ರ ತೆರವು ಮಾಡಲು ಕ್ರಮ ಜರಿಗಿಸಬೇಕೆಂದಿದ್ದರೂ ಸಹ ಮೈಸೂರಿನ ಜಿಲ್ಲಾಡಳಿತವು ಮೇಲ್ಕಂಡ ಯಾವುದೇ ಕ್ರಮ ತೆಗೆದುಕೊಳ್ಳದೆ ಹಿಂದೂ ದೇವಸ್ಥಾನವನ್ನು ಕೆಡವಿರುವುದು ಖಂಡನೀಯ ಎಂದು ಹೇಳಿದರು.


SHARE THIS

Author:

0 التعليقات: