ಅಗರ್ತಲಾ: ಸಿಪಿಎಂ ಕಚೇರಿಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಗುವಾಹಟಿ: ತ್ರಿಪುರಾದ ಕೆಲವು ಜಿಲ್ಲೆಗಳಲ್ಲಿ ಹಾಗೂ ರಾಜ್ಯ ರಾಜಧಾನಿ ಅಗರ್ತಲಾದಲ್ಲಿ ಹಿಂಸಾಚಾರ ಘಟನೆಯ ನಂತರ ಸಿಪಿಎಂ ಪಕ್ಷದ ಪ್ರಧಾನ ಕಛೇರಿ ಸೇರಿದಂತೆ ಎರಡು ಕಚೇರಿಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು NDTV ವರದಿ ಮಾಡಿದೆ.
ಸಿಪಿಎಂ ರಾಜ್ಯ ಪ್ರಧಾನ ಕಚೇರಿ ಭಾನು ಸ್ಮೃತಿ ಭವನ ಹಾಗೂ ದಶರಥ ಭವನಕ್ಕೆ ಬೆಂಕಿ ಹಚ್ಚಲಾಗಿದೆ. ಕಚೇರಿಯ ಹೊರಗಿದ್ದ ಹಲವಾರು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಸಿಪಿಎಂ ಜೊತೆಗಿನ ಘರ್ಷಣೆಯನ್ನು ವಿರೋಧಿಸಿ ಅಗರ್ತಲಾದಲ್ಲಿ ಬಿಜೆಪಿ ಜಾಥಾ ನಡೆಸಿದ ನಂತರ ಸಮಸ್ಯೆ ಆರಂಭವಾಯಿತು. ಸಿಪಿಎಂ ಕಚೇರಿಯಿಂದ ಬಾಂಬ್ಗಳನ್ನು ಎಸೆಯಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
0 التعليقات: