Tuesday, 28 September 2021

ಯಾದಗಿರಿಯಲ್ಲಿ ಮತಾಂತರಕ್ಕೆ ಯತ್ನ ಪ್ರಕರಣ; ನಾಲ್ವರ ಬಂಧನ

ಯಾದಗಿರಿಯಲ್ಲಿ ಮತಾಂತರಕ್ಕೆ ಯತ್ನ ಪ್ರಕರಣ; ನಾಲ್ವರ ಬಂಧನ


ಯಾದಗಿರಿ: ಯಾದಗಿರಿಯ ನೀಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಜನರ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ನಾಲ್ವರನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಬಂಧಿತರನ್ನು 'ಕ್ರೈಸ್ತ ಪಾದ್ರಿ ಜೇಮ್ಸ್ ಡೇವಿಡ್ ದಾಸ್ ಮಾಧ್ವಾರ, ಶಾಂತರಾಜ ಜೇಮ್ಸ್ ದಾಸ್, ನೀಲಮ್ಮ ಜೇಮ್ಸ್‌ದಾಸ್, ಮಾಳಮ್ಮ ರಾಘವೇಂದ್ರ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಸಿಪಿಐ ವಿಜಯ ಕುಮಾರ ತಿಳಿಸಿದ್ದಾರೆ.

ಬಂಧಿತರು ಗ್ರಾಮಸ್ಥರನ್ನು ಪ್ರಮುಖವಾಗಿ ದಲಿತರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಕೆಲವು ಯುವಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯುವಕರು ಹಾಗೂ ಪಾದ್ರಿ ಜೇಮ್ಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸಾಮೂಹಿಕ ಮತಾಂತರಕ್ಕಾಗಿ ಸರ್ಕಾರದ ಆದೇಶವಿದೆ ಪಾದ್ರಿ ಜೇಮ್ಸ್ ಹೇಳಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ,

ಮಾತಿನ ಚಕಮಕಿ ವೇಳೆ ಪಾದ್ರಿ ಜೇಮ್ಸ್ ಅವರು, ದಲಿತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದು ವಾಸ್ತವವಾಗಿ "ಮತಂತರ" ಅಲ್ಲ, ಆದರೆ "ರೂಪಾಂತರ" ಎಂದು ಹೇಳಿದರು. ಈ ವೇಳೆ ಗ್ರಾಮದಲ್ಲಿ ಚರ್ಚ್ ಇಲ್ಲದಿರುವಾಗ ನೀವೇಕೆ ಹಳ್ಳಿಗಳಲ್ಲಿನ ಜನರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ಕೇಳಲಾಗಿತ್ತು. ಈ ವೇಳೆ ಇದೀಗ ಗ್ರಾಮದಲ್ಲಿರುವವರನ್ನು ಮತಾಂತರ ಮಾಡಲು ಎಲ್ಲಾ ರೀತಿಯ ಶ್ರಮವನ್ನು ಪಡಲಾಗುತ್ತಿದೆ. ಅವರ ನಂಬಿಕೆ ಬದಲಾದ ಬಳಿಕ ಯೇಸುವಿನ ಆಶೀರ್ವಾದ ಅವರಿಗೆ ಸಿಗಲಿದೆ ಎಂದು ಪಾದ್ರಿ ಹೇಳುತ್ತಿದ್ದರು ಎಂದು ಯುವಕರು ಹೇಳಿಕೊಂಡಿದ್ದಾರೆ.

ಇದಷ್ಟೇ ಅಲ್ಲದೆ, ಸಾಮೂಹಿಕ ಮತಾಂತರಕ್ಕೆ ಸರ್ಕಾರದ ಆದೇಶವಿದೆ ಎಂದು ಹೇಳುತ್ತಿದ್ದ ಪಾದ್ರಿ, ಸರ್ಕಾರದ ಆದೇಶವನ್ನು ತೋರಿಸಲು ಮಾತ್ರ ನಿರಾಕರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿಗಳು ಭಾನುವಾರ (ಸೆ.26)ರಂದು ನೀಲಹಳ್ಳಿ ಗ್ರಾಮದಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ನರಸಪ್ಪ ಭೀಮರಾಯ ಜೇಗರ ದೂರು ನೀಡಿದ್ದರು ಎಂದು ಪಿಎಸ್‌ಐ ಭೀಮರಾಯ ಬಂಕ್ಲಿ ತಿಳಿಸಿದ್ದಾರೆ.

ಮತಾಂತರ ಸಂಬಂಧ ಯುವಕರು ನಾಲ್ವರ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಭಾನುವಾರವೇ ದೂರು ದಾಖಲಿಸಿದ್ದಾರೆ. ಈ ಬೆಳವಣಿಗೆ ಬಳಿಕ ಬಂಧಿತರು ಪ್ರತಿದೂರು ದಾಖಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಮತ್ತು ಇತರರು ಸೋಮವಾರ ಸಂಜೆ ಸೈದಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.SHARE THIS

Author:

0 التعليقات: