ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ :
ಯಾರಿಗೆ ಯಾವ ಖಾತೆ?
ಕಾಬೂಲ್ : ಹೊಸ ಆಫ್ಘಾನಿಸ್ತಾನ ಸರ್ಕಾರ ವನ್ನು ರಚಿಸುವುದಾಗಿ ತಾಲಿಬಾನ್ ಘೋಷಿಸಿದೆ. ಮುಲ್ಲಾ ಮುಹಮ್ಮದ್ ಹಸನ್ ಅಖುಂದ್ ನೇತೃತ್ವದ ಉಸ್ತುವಾರಿ ಸರ್ಕಾರವನ್ನು ಆಫ್ಘಾನಿಸ್ತಾನ ಹೊಂದಲಿದೆ. ಒಟ್ಟು 33 ಸಚಿವರನ್ನು ಹೊಸ ಸರ್ಕಾರಕ್ಕೆ ಸೇರಿಸಲಾಗಿದೆ.
ಜಬೀಹುಲ್ಲಾ ಮುಜಾಹಿದ್ ಹೊಸ ಆಫ್ಘನ್ ಸರ್ಕಾರ ಮತ್ತು ಸಚಿವ ಸಂಪುಟವನ್ನು ಘೋಷಿಸಿದ್ದಾರೆ. ಆಫ್ಘಾನಿಸ್ತಾನದ ಹೊಸ ಸರ್ಕಾರ ಇಂದಿನನಿಂದ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಇದಕ್ಕಾಗಿ ಇಂದು ಪ್ರಮಾಣವಚನದಂತಹ ಕಾರ್ಯಕ್ರಮ ನಡೆಸಬಹುದು. ಆಫ್ಘನ್ ಸರ್ಕಾರದಲ್ಲಿ ಯಾವ ನಾಯಕನಿಗೆ ಯಾವ ಹುದ್ದೆ ಸಿಕ್ಕಿದೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ
ಪ್ರಧಾನಮಂತ್ರಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್
ಉಪ ಪ್ರಧಾನಿ 1 ಮುಲ್ಲಾ ಬರದಾರ್
ಡೆಪ್ಯುಟಿ ಪಿಎಂ 2 ಅಬ್ದುಲ್ ಸಲಾಮ್ ಹನಾಫಿ
ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿ
ರಕ್ಷಣಾ ಸಚಿವ ಮೊಹಮ್ಮದ್ ಜಾಕೋಬ್ ಮುಜಾಹಿದ್
ಹಣಕಾಸು ಸಚಿವ ಮುಲ್ಲಾ ಹಿದಾಯತುಲ್ಲಾ ಬದರಿ
ವಿದೇಶಾಂಗ ವ್ಯವಹಾರಗಳ ಸಚಿವ ಮೌಲ್ವಿ ಅಮೀರ್ ಖಾನ್ ಮುಕ್ಕಿ
ಶಿಕ್ಷಣ ಸಚಿವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್
ನಿರಾಶ್ರಿತರ ವ್ಯವಹಾರಗಳ ಸಚಿವ ಖಲೀಲುರ್ ರಹಮಾನ್ ಹಕ್ಕ್ನಿ
ಉಪ ವಿದೇಶಾಂಗ ಸಚಿವ ಶೇರ್ ಮೊಹಮ್ಮದ್ ಸ್ಟೆನೆಕ್ಜಾಯ್
ಸಂಸ್ಕೃತಿ ಉಪ ಸಚಿವ ಜಬೀವುಲ್ಲಾ ಮುಜಾಹಿದ್
ಖರಿ ಫಸಿಹುದ್ದೀನ್, ರಕ್ಷಣಾ ಸಚಿವಾಲಯದ ಸೇನಾ ಸಿಬ್ಬಂದಿ ಮುಖ್ಯಸ್ಥ
ಸೇನಾ ಮುಖ್ಯಸ್ಥ ಮುಲ್ಲಾ ಫಜಲ್ ಅಖುಂದ್
ಗುಪ್ತಚರ ಉಪ ಮುಖ್ಯಸ್ಥ ಮುಲ್ಲಾ ತಾಜ್ ಮೀರ್ ಜವಾದ್
ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್ ಡಿಎಸ್) ಮುಖ್ಯಸ್ಥ ಮುಲ್ಲಾ ಅಬ್ದುಲ್ ಹಕ್ ವಸಿಕ್
0 التعليقات: