Thursday, 23 September 2021

ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ವತಿಯಿಂದ ಪ್ರತಿಭೋತ್ಸವ ಕಾರ್ಯಾಗಾರ


 ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲೆ ವತಿಯಿಂದ ಪ್ರತಿಭೋತ್ಸವ ಕಾರ್ಯಾಗಾರ

ಮಂಗಳೂರು: ಕರ್ನಾಟಕ ರಾಜ್ಯ   ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಅಧೀನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪ್ರತಿಭೋತ್ಸವದ ಅಂಗವಾಗಿ, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ವತಿಯಿಂದ  ಸೆಪ್ಟೆಂಬರ್ 22 ಬುಧವಾರ ರಾತ್ರಿ 7.30ಕ್ಕೆ ಜಿಲ್ಲಾ ಮಟ್ಟದ ಪ್ರತಿಭೋತ್ಸವ ಕಾರ್ಯಾಗಾರ ಜಿಲ್ಲಾಧ್ಯಕ್ಷರಾದ ಮುನೀರ್ ಸಖಾಫಿ ಉಳ್ಳಾಲ‌ರವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಸುನ್ನೀ ಜಂಇಯ್ಯತುಲ್ ಉಲಮಾ  ಕಛೇರಿಯಲ್ಲಿ ನಡೆಯಿತು.

ಜಿಲ್ಲಾ ಫಿನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ ಕಾರ್ಯಾಗಾರವನ್ನು ಉದ್ಘಾಟಿಸಿ, ಜಿಲ್ಲಾ ಪ್ರತಿಭೋತ್ಸವ ಸಮಿತಿ ಚೇರ್ಮ್ಯಾನ್ ನವಾಝ್ ಸಖಾಫಿ ಅಡ್ಯಾರ್ ಪದವು ರವರು ವಿಷಯ ಮಂಡನೆ ನಡೆಸಿ,ಪ್ರತಿಭೋತ್ಸವ ಕೈಪಿಡಿಯನ್ನು  ಡಿವಿಷನ್ ಸಮಿತಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ಹೈದರಾಲಿ 4 ನೇ ಬ್ಲಾಕ್ ಕಾಟಿಪಳ್ಳ ಹಾಗೂ ವಿಸ್ಡಂ ಕಾರ್ಯದರ್ಶಿ ಸುಹೈಲ್ 10th ಮೈಲ್ ಉಪಸ್ಥಿತರಿದ್ದರು.

ಜಿಲ್ಲಾ ಪ್ರತಿಭೋತ್ಸವ ಸಮಿತಿ ಕನ್ವೀನರ್ ನೌಫಾಲ್ ಫರೀದ್‌ನಗರ ಸ್ವಾಗತಿಸಿ, ಜಿಲ್ಲಾ ರೈನ್ಬೋ ಕಾರ್ಯದರ್ಶಿ ಮನ್ಸೂರ್ ಬಜಾಲ್ ವಂದಿಸಿದರು.
SHARE THIS

Author:

0 التعليقات: