Tuesday, 14 September 2021

ತಾಲಿಬಾನ್ ಉಗ್ರ ಬರಾದಾರ್‌ ಬದುಕಿದ್ದಾನೆ!


ತಾಲಿಬಾನ್ ಉಗ್ರ ಬರಾದಾರ್‌ ಬದುಕಿದ್ದಾನೆ!

ಕಾಬೂಲ್‌ : ನೂತನವಾಗಿ ರಚನೆಯಾಗಿರುವ ತಾಲಿಬಾನ್‌ ಸರಕಾರದ ಉಪ ಪ್ರಧಾನಿಯಾದ ಮುಲ್ಲಾ ಅಬ್ದುಲ್‌ ಘನಿ ಬರಾದಾರ್‌ ಇನ್ನೂ ಜೀವಂತವಾಗಿದ್ದಾನೆ. ಅವರ ಹತ್ಯೆಯಾಗಿಲ್ಲ ಎಂದು ತಾಲಿಬಾನಿ ಗಳು ಸ್ಪಷ್ಟಪಡಿಸಿದ್ದಾರೆ. ಬರಾದಾರ್‌ ಜೀವಂತವಾಗಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಕಂದಹಾರ್‌ ನಲ್ಲಿ ಇತ್ತೀಚೆಗೆ ನಡೆದಿದೆಯೆನ್ನಲಾದ ತಾಲಿಬಾನಿಗಳ ಸಭೆಯಲ್ಲಿ ಆತ ಹಾಜರಿರುವ ವೀಡಿಯೋವನ್ನು ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಲಾಗಿದೆ.

ಈ ಬಗ್ಗೆ ಧ್ವನಿ ಸಂದೇಶ ಬಿಡುಗಡೆ ಮಾಡಿರುವ ತಾಲಿಬಾನ್‌ ವಕ್ತಾರ ಸಲೈಲ್‌ ಶಹೀನ್‌, “ಬರಾದಾರ್‌ ಸತ್ತಿಲ್ಲ. ಆತ ಇನ್ನೂ ಜೀವಂತವಾಗಿ ದ್ದಾನೆ. ಅಧಿಕಾರ ಕಿತ್ತಾಟದ ಹಿನ್ನೆಲೆಯಲ್ಲಿ ಅವನನ್ನು ಹತ್ಯೆಗೈಯ್ಯಲಾಗಿದೆ ಎಂಬ ವದಂತಿಗಳು ಸುಳ್ಳು ಹಾಗೂ ಆಧಾರ ರಹಿತ’ ಎಂದಿದ್ದಾನೆ.

ಇನ್ನು, ಅಧಿಕಾರ ಹಂಚಿಕೆ ವಿಚಾರದಲ್ಲಿ ತಾಲಿಬಾನಿಗಳು ಹಾಗೂ ಹಕ್ಕಾನಿ ಗುಂಪಿನ ನಡುವೆ ಹೊಡೆದಾಟವಾಗಿದೆ ಎಂಬ ವಿಚಾರವನ್ನೂ ಅಲ್ಲಗಳೆದಿದ್ದಾನೆ.SHARE THIS

Author:

0 التعليقات: