Tuesday, 14 September 2021

ಬೆಂಗಳೂರು: ಮೇಲ್ಸೇತುವೆಯಲ್ಲಿ ಅಪಘಾತ; ಇಬ್ಬರು ಯುವತಿಯರು ಮೃತ್ಯು

ಬೆಂಗಳೂರು:ಮೇಲ್ಸೇತುವೆಯಲ್ಲಿ ಅಪಘಾತ; ಇಬ್ಬರು ಯುವತಿಯರು ಮೃತ್ಯು

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಹೆದ್ದಾರಿ ಮೇಲ್ಸೇತುವೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನವೊಂದರ ನಡುವೆ ಅಪಘಾತ ಸಂಭವಿಸಿದ್ದು, ಮೇಲ್ಸೇತುವೆಯಿಂದ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿದ ಘಟನೆ ನಡೆದಿದೆ.

ಮೇಲ್ಸೇತುವೆ ಮೇಲೆ ವೇಗವಾಗಿ ಬಂದ ಕಾರು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಆಯತಪ್ಪಿ  ಇಬ್ಬರು ಯುವತಿ ಮೇಲಿಂದ ಹೆದ್ದಾರಿ ಮೇಲೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ ಇಬ್ಬರ ಚಹರೆ ಪತ್ತೆಯಾಗಬೇಕಿದ್ದು. ಕಾರು ಮೇಲ್ಸೇತುವೆ ಅಂಚಿಗೆ ಸಿಲುಕಿದೆ. ಸ್ಥಳಕ್ಕೆ ಮೇಲ್ಸೇತುವೆ ಪೆಟ್ರೋಲಿಂಗ್ ಸಿಬ್ಬಂದಿ ದೌಡಾಯಿಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ.‌



SHARE THIS

Author:

0 التعليقات: