Thursday, 23 September 2021

ಕೆಲ ಫೋಟೊಗಳನ್ನು ಕಾಪಿ ಮಾಡಲಾಗದು: ವಿಮಾನದಲ್ಲಿ ಸಿಂಗ್‌ ಪತ್ರಿಕಾಗೋಷ್ಠಿ ಫೋಟೊ ಪ್ರಕಟಿಸಿ ವ್ಯಂಗ್ಯವಾಡಿದ ಕಾಂಗ್ರೆಸ್‌


 ಕೆಲ ಫೋಟೊಗಳನ್ನು ಕಾಪಿ ಮಾಡಲಾಗದು: ವಿಮಾನದಲ್ಲಿ ಸಿಂಗ್‌ ಪತ್ರಿಕಾಗೋಷ್ಠಿ ಫೋಟೊ ಪ್ರಕಟಿಸಿ ವ್ಯಂಗ್ಯವಾಡಿದ ಕಾಂಗ್ರೆಸ್‌

ಹೊಸದಿಲ್ಲಿ: ತನ್ನ ಅಮೆರಿಕಾ ಯಾತ್ರೆಯ ನಡುವೆ ತಾನು ಕೆಲಸದಲ್ಲಿ ನಿರತರಾಗಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ತಾಣ ಖಾತೆಗಳಲ್ಲಿ ಪ್ರಕಟಿಸಿದ ಫೋಟೊ ಸದ್ಯ ಸಾಮಾಜಿಕ ತಾಣದಲ್ಲಿ ಟ್ರೋಲ್‌ ಗೊಳಗಾಗಿದೆ. ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಪಕ್ಷಗಳು ಈ ಹಿಂದಿನ ಪ್ರಧಾನಿಗಳು ವಿಮಾನದಲ್ಲಿ ಪ್ರಯಾಣಿಸುತ್ತಾ ಕಾರ್ಯ ನಿರತರಾದ ಫೋಟೊಗಳನ್ನೂ ಹಂಚಿಕೊಂಡಿದೆ. 

ತನ್ನ ಅಧಿಕೃತ ಖಾತೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ವಿಮಾನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವ ಫೋಟೊವೊಂದನ್ನು ಪ್ರಕಟಿಸಿದ ಕಾಂಗ್ರೆಸ್‌ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಲೆಳೆದಿದೆ. ಎಲ್ಲಾ ಫೋಟೊಗಳನ್ನು ಕಾಪಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅದು ಕಿಚಾಯಿಸಿದೆ.

ಇನ್ನು ಹಲವಾರು ಮಂದಿ ಪ್ರಧಾನಿ ಪೋಟೊದಲ್ಲಿ ಓದುತ್ತಿರುವ ಪತ್ರದ ಹಿಂದಿಯ ಬೆಳಕಿನ ಕುರಿತು ಬೆಟ್ಟು ಮಾಡಿದರೆ, ಹಲವರು ಪ್ರಧಾನಿಯ ಕರ್ತವ್ಯಪರತೆಯನ್ನು ಶ್ಲಾಘಿಸಿದ್ದಾರೆ. ಈ ನಡುವೆ ಮಾಜಿ ಪ್ರಧಾನಿಗಳಾದ ರಾಜೀವ್‌ ಗಾಂಧಿ, ಮನಮೋಹನ್‌ ಸಿಂಗ್‌, ಜವಹರಲಾಲ್‌ ನೆಹರೂ, ಲಾಲ್‌ ಬಹದ್ದೂರ್‌ ಶಾಸ್ತ್ರಿ ವಿಮಾನದಲ್ಲಿ ಕರ್ತವ್ಯ ನಿರತರಾದ ಫೋಟೊಗಳನ್ನು ಪ್ರಕಟಿಸಿ, "ಇದು ಪ್ರಚಾರಕ್ಕಾಗಿ ಕ್ಲಿಕ್ಕಿಸಿದ ಫೋಟೊಗಳಂತೆ ಕಾಣುವುದಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ. 


SHARE THIS

Author:

0 التعليقات: