Thursday, 16 September 2021

ಮಂಜನಾಡಿ: ಎಸ್ ವೈ ಎಸ್ ಬಂಡಸಾಲೆ ಶಾಖೆಯ ನೂತನ ಸಮಿತಿ ರಚನೆ


 ಮಂಜನಾಡಿ: ಎಸ್ ವೈ ಎಸ್ ಬಂಡಸಾಲೆ ಶಾಖೆಯ ನೂತನ ಸಮಿತಿ ರಚನೆ

ಮಂಜನಾಡಿ: ಎಸ್ ವೈ ಎಸ್ ಬಂಡಸಾಲೆ ಶಾಖೆಯ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆಯು ಪೂರ್ವಾದ್ಯಕ್ಷ ಫಾರೂಕ್ ಹಾಜಿ ಇವರ ಅಧ್ಯಕ್ಷತೆಯಲ್ಲಿ ಮುನವ್ವಿರುಲ್ ಇಸ್ಲಾಂ ಮದರಸ ಬಂಡಸಾಲೆ ಯಲ್ಲಿ ಸೆ.14 ರಂದು ನಡೆಯಿತು. ಇಬ್ರಾಹಿಂ ಮದನಿ ರವರ ದುಃಅ ದೊಂದಿಗೆ ಆರಂಭಗೊಂಡ ಸಭೆಯನ್ನು ಸ್ಥಳೀಯ ಸದರ್ ಉಸ್ತಾದ್ ಶರೀಫ್ ಮದನಿ ಬೆಳ್ತಂಗಡಿ ಉದ್ಘಾಟಿಸಿದರು. ಮೇಲ್ಘಾಟಕರಾದ ವೀಕ್ಷಕರಾಗಿ ಸೆಂಟರ್ ಅಧಿಕಾರಿ ಇಬ್ರಾಹಿಂ ಮದನಿ ಆಗಮಿಸಿದರು. 

ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ಸ್ವಾಗತಿಸಿ. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. 

2021/22 ರ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಡಸಾಲೆ

ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ (ಅದ್ದು), ಕೋಶಾದಿಕಾರಿಯಾಗಿ ಮುಹಮ್ಮದ್ ಉಪಾಧ್ಯಕ್ಷರಾಗಿ B.H.ಮುಹಮ್ಮದ್,  ದಅವ ಸೆಕ್ರಟರಿಯಾಗಿ  K.I. ಅಶ್ರಫ್,  ಇಸಾಬ ಸೆಕ್ರಟರಿಯಾಗಿ  B.M ಹಮೀದ್,  ಸೆಂಟರ್ ಕೌನ್ಸಿಲರ್ ಫಾರೂಕ್ ಹಾಜಿ ಪ್ರಿಟಂಕ್, ಬಿ.ಎಮ್ ಹಮೀದ್, K I ಅಲೀ ಕುಂಞ ಹಾಗು 13 ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು. ಅಬ್ದುಲ್ ರಹಮಾನ್ (ಅದ್ದು)ಧನ್ಯವಾದ ಸಲ್ಲಿಸಿದರು.SHARE THIS

Author:

0 التعليقات: