Thursday, 9 September 2021

ಭಾರತ ಕ್ರಿಕೆಟ್ ತಂಡದ ಇನ್ನೊಬ್ಬ ಸಹಾಯಕ ಸಿಬ್ಬಂದಿಗೆ ಕೊರೋನ

 

ಭಾರತ ಕ್ರಿಕೆಟ್ ತಂಡದ ಇನ್ನೊಬ್ಬ ಸಹಾಯಕ ಸಿಬ್ಬಂದಿಗೆ ಕೊರೋನ

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಪರಿಣಾಮಬೀರಬಲ್ಲ ಬೆಳವಣಿಗೆಯೊಂದು ನಡೆದಿದೆ. ಮ್ಯಾಂಚೆಸ್ಟರ್ ನಲ್ಲಿ ಭಾರತದ ಇನ್ನೊಬ್ಬ ಸಹಾಯಕ ಸಿಬ್ಬಂದಿಗೆ ಕೊರೋನ ದೃಢಪಟ್ಟಿದೆ. ಐದನೇ ಟೆಸ್ಟ್ ಮುನ್ನಾದಿನವಾಗಿರುವ ಗುರುವಾರ ಭಾರತದ ಅಭ್ಯಾಸವು ರದ್ದಾಗಿದೆ.

ಮುಂದಿನ ಸೂಚನೆಯ ತನಕ ಹೊಟೇಲ್ ಕೊಠಡಿಯಲ್ಲೇ ಇರುವಂತೆ ಭಾರತೀಯ ತಂಡದ ಸದಸ್ಯರಿಗೆ ತಿಳಿಸಲಾಗಿದೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ ಫೋ ತಿಳಿಸಿದೆ.

ಇಡೀ ಭಾರತೀಯ ತಂಡವು ಗುರುವಾರ ಬೆಳಗ್ಗೆ ಹೊಸ ಪರೀಕ್ಷೆಗೆ ಒಳಗಾಗಿದ್ದು ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ಆಟಗಾರರ ಗುಂಪಿನಲ್ಲಿ ಪಾಸಿಟಿವ್ ಟೆಸ್ಟ್ ಬಂದರೆ ಯುಎಇಯಲ್ಲಿ ಸೆಪ್ಟಂಬರ್ 19ರಂದು ಪುನರಾರಂಭವಾಗಲಿರುವ 2021ರ ಐಪಿಎಲ್ ಮೇಲೆ ಪರಿಣಾಮಬೀರಬಹುದು.

ನಾಲ್ಕನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಗೆ ಕೊರೋನ ದೃಢಪಟ್ಟಿತ್ತು.  ಈ ಮೂವರನ್ನು ತಂಡದೊಂದಿಗೆ ಮ್ಯಾಂಚೆಸ್ಟರ್ ಗೆ ತೆರಳದಂತೆ ತಡೆಯಲಾಗಿತ್ತು.SHARE THIS

Author:

0 التعليقات: