ಎಸ್.ವೈ.ಎಸ್ ಕೆಮ್ಮಾಯಿ ವಾರ್ಷಿಕ ಮಹಾಸಭೆ
ಪುತ್ತೂರು: SYS ಕೆಮ್ಮಾಯಿ ಬ್ರಾಂಚ್ ಇದರ ವಾರ್ಷಿಕ ಮಹಾಸಭೆ ದಿನಾಂಕ 05/09/21 ಆದಿತ್ಯವಾರ ಅಬ್ದುಲ್ ಅಝೀಝ್ ಗಡಿಯಾರ ಅವರ ಮನೆಯಲ್ಲಿ ನಡೆಯಿತು. ಅಬ್ದುಲ್ ಹಮೀದ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ, ಅಬ್ದುಲ್ಲಾ ಮುಸ್ಲಿಯಾರ್ ದುಆ ಮಾಡುವುದರೊಂದಿಗೆ ಸಭೆ ಆರಂಭಗೊಂಡಿತು. ಅಬ್ದುಲ್ ರಹಿಮಾನ್ ಕೆಮ್ಮಾಯಿ ಸ್ವಾಗತಿಸಿದರು.
SYS ಪುತ್ತೂರು ಸೆಂಟರ್ ಅಧ್ಯಕ್ಷರಾದ ಅಬೂಶಝ ಉಸ್ತಾದರು ಉದ್ಘಾಟನೆ ಮಾಡಿ, ಅಬ್ದುಲ್ ಹಮೀದ್ ಸಖಾಫಿ ಉಸ್ತಾದರು ಅಧ್ಯಕ್ಷ ಭಾಷಣ ಮಾಡಿದರು. SYS ಕೆಮ್ಮಾಯಿ ಬ್ರಾಂಚ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೆಮ್ಮಾಯಿ 2019 ರಿಂದ 2021 ದ ವರೆಗಿನ ವರೆದಿ ಹಾಗೂ ಲೆಕ್ಕಪತ್ರ ಮಂಡನೆ ಮಾಡಿದರು.
ನೂತನ ಸಾಲಿನ ಹೊಸ ಸಮಿತಿ ರಚಿಸಲಾಯಿತು. ಅಧ್ಯಕ್ಷ ರಾಗಿ ಅಬ್ದುಲ್ ರಹೀಂ ಕೆಮ್ಮಾಯಿ, ಕಾರ್ಯದರ್ಶಿಯಾಗಿ ರಫೀಕ್ ಸಖಾಫಿ ಬಳ್ಳಾರಿ, ಕೋಶಾಧಿಕಾರಿಯಾಗಿ ಯೂಸುಫ್ SES , ಇಸಾಬ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ , ದಅವಾ ಕಾರ್ಯದರ್ಶಿ ಯಾಗಿ ಮನ್ಸೂರ್ ಸಅದಿ, ಉಪಾಧ್ಯಕ್ಷ ರಾಗಿ ಅಬ್ದುಲ್ ಶಕೂರ್ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಪುತ್ತೂರು ಸೆಂಟರ್ ನೇತಾರರಾದ ಅಬೂಶಝ ಉಸ್ತಾದರು, ಜಿಲ್ಲಾ ಟೀಮ್ ಇಸಭಾ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ, ಸೆಂಟರ್ ಕಾರ್ಯದರ್ಶಿ ಸ್ವಾಲಿಹ್ ಮುರ , ಸೆಂಟರ್ ಟೀಮ್ ಇಸಭಾ ಕಾರ್ಯದರ್ಶಿ ಶಾಹುಲ್ ಹಮೀದ್ (ತಾಜ್ ಮಹಲ್) ಕಬಕ, ಹಾಗೂ ಜಿಲ್ಲಾ ನಾಯಕರಾದ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಉಪಸ್ಥಿತರಿದ್ದರು.
0 التعليقات: