Monday, 20 September 2021

ಅಪರಿಚಿತ ವಾಹನ ಡಿಕ್ಕಿ, ಕರಡಿ ಸಾವು

ಅಪರಿಚಿತ ವಾಹನ ಡಿಕ್ಕಿ, ಕರಡಿ ಸಾವು

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿಯಾಗಿ ಕರಡಿ ಸ್ಥಳದಲ್ಲೇ ಮೃತಪಟ್ಟಿದೆ.

ಸುಮಾರು 10 ವರ್ಷದ ಕರಡಿ ರಾತ್ರಿ ಆಹಾರ ಅರಸಿಕೊಂಡು ಹೆದ್ದಾರಿ ಪಕ್ಕದ ಗದ್ದೆಗೆ ಬಂದಿದೆ. ನಸುಕಿನ ಜಾವ ಹೆದ್ದಾರಿ ದಾಟಿಕೊಂಡು ಪುನಃ ಕಾಡಿಗೆ ಹೋಗುವಾಗ ವಾಹನ ಡಿಕ್ಕಿ ಹೊಡೆದಿರುವ ಸಾಧ್ಯತೆ‌ ಇದೆ ಎಂದು ವಲಯ ಅರಣ್ಯ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಆಗಸ್ಟ್ 21ರಂದು ಇದೇ ರೀತಿಯ ಘಟನೆಯಲ್ಲಿ ಕರಡಿ ಸಾವನ್ನಪ್ಪಿತ್ತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೊಂಡ ನಂತರ ವಾಹನಗಳು ವೇಗವಾಗಿ ಚಲಿಸುತ್ತಿವೆ. ಕರಡಿಗಳು ಓಡಾಡುವ ಜಾಗದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

SHARE THIS

Author:

0 التعليقات: