ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್: ಅರ್ಧವಾರ್ಷಿಕ ಮಹಾಸಭೆ ಕಾರ್ಯಕ್ರಮ
ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ವತಿಯಿಂದ ದಿನಾಂಕ 03/09/2021 ಶುಕ್ರವಾರ ರಾತ್ರಿ ಇಶಾ ನಮಾಝ್ ನಂತರ ಎಸ್.ವೈ.ಎಸ್ ಕೃಷ್ಣಾಪುರ ಸೆಂಟರ್ ಕಛೇರಿಯಲ್ಲಿ ಅರ್ಧವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ಕಾರ್ಯದರ್ಶಿ ಅಫ್ರೀದ್ ಜಂಕ್ಷನ್ ನೆರೆದವರಿಗೆ ಸ್ವಾಗತ ಹೇಳಿದರು. ಎಸ್.ವೈ.ಎಸ್ ಕೃಷ್ಣಾಪುರ ಸೆಂಟರ್ ನಾಯಕರಾದ ತಮೀಮ್ ಕೃಷ್ಣಾಪುರ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಅಲ್-ಕಾಮಿಲ್ ಹಿತವಚನ ನಡೆಸಿಕೊಟ್ಟರು. ವೀಕ್ಷಕರಾಗಿ ಸೆಕ್ಟರ್ ಉಸ್ತುವಾರಿ ಫಾರೂಕ್ ಸಖಾಫಿ ಕಾಟಿಪಳ್ಳ ಹಾಗೂ ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ನಾಯಕರಾದ ಹೈದರ್ 4th Block ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ಅಧ್ಯಕ್ಷರಾದ ಮಝಾರ್ ಕೃಷ್ಣಾಪುರ ವಹಿಸಿದರು. ಕಾರ್ಯಕರ್ತರೆಲ್ಲರೂ ಪ್ರಸ್ತುತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಕಾರ್ಯಕ್ರಮವು ಪೂರ್ಣವಾಗಿ ಯಶಸ್ವಿಯಾಯಿತು ಎಂದು ತಿಳಿದು ಬಂದಿದೆ.
0 التعليقات: