Monday, 20 September 2021

ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಆಸ್ಕರ್ ಪ್ರಶಸ್ತಿಯೂ ದಕ್ಕಬೇಕು ಎಂದ ಟ್ವಿಟ್ಟರಿಗರು


 ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಆಸ್ಕರ್ ಪ್ರಶಸ್ತಿಯೂ ದಕ್ಕಬೇಕು ಎಂದ ಟ್ವಿಟ್ಟರಿಗರು

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ತಾವು ನಟನೆಗೂ ಸೈ ಎಂದೆನಿಸಿಕೊಂಡಿದ್ದಾರೆ. ಕ್ರೆಡ್ ಸಂಸ್ಥೆಯ  ಜಾಹೀರಾತಿನಲ್ಲಿ ಅವರು ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಈ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಒಂದು ಕಂಪೆನಿಯ ಬಾಸ್ ಆಗಿ, ಒಬ್ಬ ವರದಿಗಾರನಾಗಿ, ಓರ್ವ ಬ್ಯಾಂಕರ್, ಚಿತ್ರ ನಿರ್ಮಾಪಕ ಹಾಗೂ ಒಬ್ಬ ವಿದ್ಯಾರ್ಥಿಯಾಗಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ಲೀಲಾಜಾಲವಾಗಿ ನಟಿಸಿ  ಭೇಷ್ ಎನಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಿಗರಂತೂ ಅವರ ನಟನಾ ಚಾತುರ್ಯಕ್ಕೆ  ಅಚ್ಚರಿಪಟ್ಟಿದ್ದಾರೆ. ಅವರ ವೀಡಿಯೋ ಹೊರಬೀಳುತ್ತಿದ್ದಂತೆಯೇ  ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ವೀರೇಂದರ್  ಸೆಹ್ವಾಗ್ ʼಕ್ಯಾ ಫೇಕ್ತಾ ಹೇ ಯಾರ್ʼ ಎಂಬ ಪದ ಪ್ರಶಂಸೆಯಾಗಿ ಸಲ್ಲಬಹುದಾದ ಒಬ್ಬನೇ ವ್ಯಕ್ತಿ" ಎಂದು ಚೋಪ್ರಾ ಅವರನ್ನು ಹೊಗಳಿದ್ದಾರೆ.

ಇನ್ನೊಬ್ಬರು ಪ್ರತಿಕ್ರಿಯಿಸಿ, ಈಗಾಗಲೇ ಒಲಿಂಪಿಕ್ ಚಿನ್ನ ಗೆದ್ದ ಚೋಪ್ರಾರಿಗೆ ಈಗ ಆಸ್ಕರ್ ಕೂಡ ದೊರೆಯಬೇಕು ಎಂದು ಬರೆದಿದ್ದಾರೆ. ನೀರಜ್ ಚೋಪ್ರಾ ತಮ್ಮ ಜೀವನ ವೃತ್ತಾಂತದ ಕುರಿತಾದ ಸಿನೆಮಾದಲ್ಲಿ ತಾವೇ ನಟಿಸಬೇಕು ಎಂದು ಇನ್ನೊಬ್ಬರು ಬರೆದಿದ್ದಾರಲ್ಲದೆ ಹಲವು ಬಾಲಿವುಡ್ ಸ್ಟಾರ್‍ಗಳಿಗಿಂತ ಅವರು ಉತ್ತಮವಾಗಿ ನಟಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಬ್ಬ ಟ್ವಿಟ್ಟರಿಗರು ಟ್ವೀಟ್ ಮಾಡಿ ತಾವು ಆ ತಮಾಷೆಯಾಗಿರುವ ವೀಡಿಯೋವನ್ನು ಹತ್ತು ಬಾರಿ ನೋಡಿದ್ದು ಇನ್ನೂ ನೋಡಬೇಕೆನಿಸುತ್ತದೆ ಎಂದಿದ್ದಾರೆ.


SHARE THIS

Author:

0 التعليقات: