Sunday, 19 September 2021

‘ಈವೆಂಟ್ ಮುಗಿದಿದೆ’: ಪ್ರಧಾನಿ ಮೋದಿ ಅವರ ಜನ್ಮದಿನದಂದು ಲಸಿಕೆ ದಾಖಲೆ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ


 ‘ಈವೆಂಟ್ ಮುಗಿದಿದೆ’: ಪ್ರಧಾನಿ ಮೋದಿ ಅವರ ಜನ್ಮದಿನದಂದು ಲಸಿಕೆ ದಾಖಲೆ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ

ಹೊಸದಿಲ್ಲಿ:ಒಂದೇ ದಿನದಲ್ಲಿ ದಾಖಲೆಯ ಕೋವಿಡ್ -19 ಲಸಿಕೆ ನೀಡಿಕೆ ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ‘ಈವೆಂಟ್ ಈಗ ಮುಗಿದಿದೆ' ಎಂದು ಹೇಳಿದ್ದಾರೆ.

ಕೋ-ವಿನ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ ದಾಖಲೆಯ ನಂತರ ವ್ಯಾಕ್ಸಿನ್ ಕುಸಿತವನ್ನು ತೋರಿಸುವ  ವ್ಯಾಕ್ಸಿನೇಷನ್ ಟ್ರೆಂಡ್  ಗ್ರಾಫ್ ಅನ್ನು ರಾಹುಲ್ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಶುಕ್ರವಾರ ಒಂದೇ ದಿನದಲ್ಲಿ 2.5 ಕೋಟಿ ಜನರಿಗೆ ಭಾರತ ಲಸಿಕೆ ಹಾಕಿದೆ.

'ವ್ಯಾಕ್ಸಿನೇಷನ್' ಹ್ಯಾಶ್‌ಟ್ಯಾಗ್' ಬಳಸಿ' 'ಈವೆಂಟ್ ಓವರ್' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

"ಇಂತಹ ದಾಖಲೆ ಲಸಿಕೆಗಳು ದೇಶದಲ್ಲಿ ಹೆಚ್ಚು ನಡೆಯಲಿ ಎಂದು ಆಶಿಸುವೆ.  2.1 ಕೋಟಿ ಲಸಿಕೆಗಳನ್ನು ಇನ್ನೂ ಹಲವು ದಿನಗಳವರೆಗೆ ಎದುರು ನೋಡುತ್ತಿದ್ದೇವೆ. ಈ ವೇಗ ನಮ್ಮ ದೇಶಕ್ಕೆ ಬೇಕಾಗಿದೆ "ಎಂದು ರಾಹುಲ್ ಗಾಂಧಿ ಶನಿವಾರ ಟ್ವಿಟರ್‌ನಲ್ಲಿ ತಿಳಿಸಿದ್ದರು.


SHARE THIS

Author:

0 التعليقات: