Thursday, 9 September 2021

ಕೇರಳದಲ್ಲಿ ಕೋವಿಡ್ ಪ್ರಕರಣ ಇಳಿಕೆ

 

ಕೇರಳದಲ್ಲಿ ಕೋವಿಡ್ ಪ್ರಕರಣ ಇಳಿಕೆ

ಹೊಸದಿಲ್ಲಿ: ಕೇರಳದಲ್ಲಿ ಗುರುವಾರ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದರಿಂದ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 40 ಸಾವಿರಕ್ಕಿಂತ ಕಡಿಮೆಯಾಗಿದೆ.

ಭಾರತದಲ್ಲಿ ಗುರುವಾರ ಒಟ್ಟು 39,249 ಹೊಸ ಪ್ರಕರಣಗಳು ವರದಿಯಾಗಿದ್ದು, ಕೇರಳದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 26,200ಕ್ಕೆ ಇಳಿದಿದೆ. ಬುಧವಾರ ರಾಜ್ಯದಲ್ಲಿ 30196 ಪ್ರಕರಣ ದಾಖಲಾಗಿತ್ತು. ದೈನಿಕ ಪಾಸಿಟಿವಿಟಿ ದರ ಶೇಕಡ 19ರಿಂದ 16.69ಕ್ಕೆ ಕಡಿಮೆಯಾಗಿದೆ.

ಏಳು ದಿನಗಳ ದೈನಿಕ ಸರಾಸರಿ ಕೂಡಾ ಕೇರಳದಲ್ಲಿ ಇಳಿಕೆಯಾಗುತ್ತಿದೆ. ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ಅಲ್ಪ ಏರಿಕೆಯಾಗಿದ್ದು, 4219 ಪ್ರಕರಣಗಳು ವರದಿಯಾಗಿವೆ. ಬುಧವಾರ 4174 ಪ್ರಕರಣಗಳು ವರದಿಯಾಗಿದ್ದವು. ಒಟ್ಟಾರೆಯಾಗಿ ರಾಜ್ಯದಲ್ಲಿ ಏಳು ದಿನಗಳ ಸರಾಸರಿ ಕಡಿಮೆಯಾಗಿದೆ.

ಮುಂಬೈನಲ್ಲಿ ಬುಧವಾರ 500 ಪ್ರಕರಣ ದಾಖಲಾದ ಬಳಿಕ ಅಲ್ಪ ಇಳಿಕೆಯಾಗಿದೆ. ಗುರುವಾರ 457 ಪ್ರಕರಣಗಳು ದಾಖಲಾಗಿವೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಜಮ್ಮು ಕಾಶ್ಮೀರದಲ್ಲಿ ಪ್ರಕರಣಗಳು ಅಲ್ಪ ಏರಿಕೆಯಾಗಿವೆ. ದೇಶದಲ್ಲಿ ಗುರುವಾರ ಒಟ್ಟು 265 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.



SHARE THIS

Author:

0 التعليقات: