Friday, 3 September 2021

ಹುಡುಗಿ ಹೊಟ್ಟೆಯೊಳಗೆ ಎರಡು ಕೆಜಿಯಷ್ಟು ಕೂದಲು; ದಂಗಾದ ವೈದ್ಯರು

ಹುಡುಗಿ ಹೊಟ್ಟೆಯೊಳಗೆ ಎರಡು ಕೆಜಿಯಷ್ಟು ಕೂದಲು; 
ದಂಗಾದ ವೈದ್ಯರು

ವಿಚಿತ್ರ ಪ್ರಕರಣವೊಂದರಲ್ಲಿ, ಹುಡುಗಿಯೊಬ್ಬಳ ಹೊಟ್ಟೆಯೊಳಗಿಂದ ಕೂದಲುಗಳ ಭಾರೀ ಉಂಡೆಯನ್ನು ಲಖನೌನದ ಬಲ್ರಾಮ್ಪುರ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ. ಸರ್ಜರಿ ವೇಳೆ ಹುಡುಗಿಯ ಹೊಟ್ಟೆಯಲ್ಲಿ ಎರಡು ಕೆಜಿಯಷ್ಟು ಕೂದಲು ಕಂಡುಬಂದಿದೆ.

ಕಳೆದ ಎರಡು ವರ್ಷಗಳಿಂದ ದುರ್ಬಲವಾಗುತ್ತಾ ಬಂದ ಈ ಹುಡುಗಿಯ ಪರಿಸ್ಥಿತಿಯನ್ನು ಆಕೆಯ ಕುಟುಂಬದ ಸದಸ್ಯರು ಅರ್ಥ ಮಾಡಿಕೊಂಡಿದ್ದು, ವಿಪರೀತ ಕೂದಲುದುರುವಿಕೆ, ಹೊಟ್ಟೆ ನೋವು ಹಾಗೂ ವಾಮಿಟಿಂಗ್ ಆಗುತ್ತಿರುವುದನ್ನು ಗಮನಿಸಿದ್ದಾರೆ.

ಹುಡುಗಿಯ ಹೊಟ್ಟೆಯ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಿದ ವೈದ್ಯರಿಗೆ ಅಲ್ಲಿ ಕೂದಲಿನ ಉಂಡೆ ಇರುವುದು ಪತ್ತೆಯಾಗಿದೆ. ಇದಾದ ಬಳಿಕ ಸಿಟಿ ಸ್ಕ್ಯಾನ್ ಹಾಗೂ ಎಂಡೋಸ್ಕೋಪಿಯಿಂದ ಈ ವಿಚಾರವನ್ನು ಖಾತ್ರಿಪಡಿಸಿಕೊಂಡ ವೈದ್ಯರು, ಹೊಟ್ಟೆಯೊಳಗೆ 20 ಸೆಂಮೀ ಅಗಲದ ಉಂಡೆ ಪತ್ತೆ ಮಾಡಿದ್ದಾರೆ.

ಹೊಟ್ಟೆಯಿಂದ ಸಣ್ಣ ಕರುಳಿಗೆ ಇದ್ದ ದ್ವಾರವು ಸಂಪೂರ್ಣವಾಗಿ ಬಂದ್ ಆಗಿದ್ದ ಕಾರಣ ಆಹಾರದ ಚಲನೆ ಸಮರ್ಪಕವಾಗಿ ಆಗುತ್ತಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಒಂದೂವರೆ ಗಂಟೆಗಳ ಕಾಲ ಸರ್ಜರಿ ಮಾಡಿದ ಬಳಿಕ ಹುಡುಗಿ ಚೇತರಿಸಿಕೊಳ್ಳುತ್ತಿದ್ದಾಳೆ.SHARE THIS

Author:

0 التعليقات: