Saturday, 4 September 2021

ತಾಳ ತಪ್ಪಿದ ತಾಲಿಬಾನ್


 ತಾಳ ತಪ್ಪಿದ ತಾಲಿಬಾನ್ 

               ಮತ್ತೆ ವಾರ್ತಾ ಮಾಧ್ಯಮಗಳಲ್ಲಿ ಅಫ್ಘಾನ್ ಸುದ್ದಿಯಾಗತೊಡಗಿದೆ . ಅಮೇರಿಕಾದ ಸೈನಿಕರು ಅಫ್ಘಾನ್ ತೊರೆದ ನಂತರ ತಾಲಿಬಾನಿಗಳು ಅಫ್ಘಾನ್ ನ ಇನ್ನಷ್ಟು ಪ್ರದೇಶಗಳನ್ನು ತನ್ನ ಕ್ರೂರವಾದ ತೆಕ್ಕೆಯೊಳಗೆ ಬಂಧಿಸತೊಡಗಿದ್ದಾರೆ. ಎಷ್ಟರವರೆಗೆಂದರೆ ತಾಲಿಬಾನಿಗಳು ಪ್ರವೇಶಿಸಲು ಸಾಧ್ಯವಿಲ್ಲವೆಂದು ಕೊಂಡಿದ್ದ ಕಾಬೂಲನ್ನೂ ವಶಪಡಿಸಿಕೊಂಡಿದ್ದಾರೆ. ಆಪ್ಘಾನಿಸ್ತಾನ ಇನ್ನು ಮುಂದೆ 'ಇಸ್ಲಾಮಿಕ್ ಎಮಿರೇಟ್ಸ್ ಓಫ್ ಆಫ್ಘಾನಿಸ್ತಾನ್ ' ಎಂಬ ಹೆಸರಿನಿಂದ ಕರೆಯಲ್ಪಡುವುದೆಂಬ ವಾರ್ತೆಗಳು ಸುದ್ದಿಯಾಗುತ್ತಿದೆ.

'ಜಿಹಾದ್' ಗೆ ತಪ್ಪುತಪ್ಪಾದ ವ್ಯಾಖ್ಯಾನ ನೀಡಿರುವುದೇ  ತಾಲಿಬಾನ್ ತಾಳ ತಪ್ಪಲು ಮುಖ್ಯ ಕಾರಣ . ಜಿಹಾದ್ 'ಫರ್ಳ್ ಖಿಫಾ' ಯಾರೂ ಮಾಡದಿದ್ದರೆ ಎಲ್ಲರೂ ತಪ್ಪಿತಸ್ಥರಾಗುತ್ತಾರೆ ಎಂಬಿತ್ಯಾದಿ  ಮೊಂಡು ವಾದಗಳನ್ನು  ಆಧಾರವಾಗಿಟ್ಟುಕೊಂಡು . ಶರೀಅತ್ ನಿಯಮಗಳಿಗೆ ವಿರುದ್ಧವಾಗುವವರನ್ನು ಕಂಡ ಕಂಡಲ್ಲಿ ಗುಂಡು ಹೊಡೆದು ಕೊಂದು ಬಿಟ್ಟರೂ ಪುಣ್ಯವಿದೆಯೆಂಬ ವಿಶ್ವಾಸ ಎಲ್ಲಿಯ ಶರೀಅತ್ ಕಲಿಸಿಕೊಡುತ್ತಿದೆ . ಯಾವ ಧರ್ಮ ಭೋದಿಸುತ್ತಿದೆ.

ಆತ್ಮಾಹುತಿ ಬಾಂಬ್ ಗಳಾಗಿ ತನ್ನ ಸ್ವತಃ ಶರೀರವನ್ನೂ , ಹಲವು ಮುಗ್ಧ ಜನರ ಜೀವವನ್ನೂ ಸುಟ್ಟು ಬಿಡುವ ಕ್ರೌರ್ಯವನ್ನು ಯಾವ ಧರ್ಮ ಕಲಿಸಿಕೊಡುತ್ತಿದೆ ? . ಕುರ್ ಆನ್ , ಶರೀಅತ್ ನ ನಿಯಮಗಳು ಒಮ್ಮೆಯೂ ಇಂತಹ ಕ್ರೂರ ಕೃತ್ಯಗಳಿಗೆ ಬೆಂಬಲವನ್ನು ನೀಡುತ್ತಿಲ್ಲ. ಕಲಿಸಿಕೊಡುತ್ತಿಲ್ಲ.ಕುರ್ ಆನ್ ತಿಳಿಸುತ್ತಿದೆ " ನಾಶಕ್ಕೀಡಾಗುವಂತಹ ಯಾವುದೇ ಕಾರ್ಯಗಳಿಗೂ ತಮ್ಮ ಶರೀರವನ್ನು ಬಲಿ ಕೊಡದಿರಿ " ಶರೀಅತ್ ನಿಯಮ ಪಾಲಕರೆಂಬ ತಾಲಿಬಾನಿಗಳಿಗೆ ಈ ಆಯತ್ ಮರೀಚಿಕೆಯಾಯಿತೇ?

ವಹ್ಹಾಬಿಸಂ ನ ಮತ್ತೊಂದು ಮುಖವಾಡವೇ ಈ ತಾಲಿಬಾನ್. ಮುಂಡಾಸು , ಪೈಜಾಮು ಧರಿಸಿ ಹೊರಗೆ ಶರೀಅತ್ ಪಾಲಕರೆಂದು ಕರೆಯಲ್ಪಡುವ ಈ ತಾಲಿಬಾನಿಗಳು ಒಳಗೊಳಗೆ ಅಬ್ದುಲ್ ವಹ್ಹಾಬ್ ನ ವಹ್ಹಾಬಿಸಂ ನ ಕ್ರೂರ ಕೃತ್ಯಗಳನ್ನು ಬೆಳೆಸಿಕೊಂಡವರು.

ತಾಲಿಬಾನಿಗಳ ಮುಖ್ಯಸ್ತನಾದ 'ಮುಲ್ಲಾ ಉಮರ್ ' ಗೆ ಬೆನ್ನೆಲುಬಾಗಿ ನಿಂತಿರುವುದು ಗಲ್ಫ್ ರಾಷ್ಟಗಳಲ್ಲಿರುವ ಸಲಫಿ ಮುಖಂಡರಾಗಿದ್ದಾರೆ.ಅಫ್ಘಾನಿಸ್ತಾನದಲ್ಲಿ 1990 ರ  ಕಾಲದಲ್ಲಿ ವಶಪಡಿಸಿಕೊಂಡ ಅಧಿಕಾರವು ಕಳೆದು ಹೋದ ವೇಳೆಯಲ್ಲಿ ತಾಳಿಬಾನ್ ಭಯೋತ್ಪಾದಕರು ಅತ್ಯಂತ ಹೆಚ್ಚಾಗಿ ಆತಂಕಕ್ಕೀಡಾದದ್ದು , ಅವರು ಕೆಡವಿದ ಮಖ್ಬರಗಳು, ಝಿಯಾರತ್ ಕೇಂದ್ರಗಳು , ಅಧಿಕಾರ ಕಳೆದುಕೊಂಡರೆ ಜೀವ ಪಡೆದುಕೊಳ್ಳಬಹುದೆಂಬ ಆತಂಕವಾಗಿತ್ತು. ಅನೇಕ ಝಿಯಾರತ್ ಕೇಂದ್ರಗಳನ್ನು ಕೆಡವಿದ ತಾಲಿಬಾನಿಗಳು ವಹ್ಹಾಬಿಂಸಂ ಕಟ್ಟಾ ಅನುಯಾಯಿಗಳಾಗಿದ್ದಾರೆ.

ಯಾಕಾಗಿ ಅಫ್ಘಾನಿಸ್ತಾನವನ್ನು  ತಾಲಿಬಾನ್  ವಶಪಡಿಸಿಕೊಂಡಾಗ  ಅಲ್ಲಿಯ ಪ್ರಜೆಗಳು ಪಾಲಾಯನಕ್ಕೆ ಸಿದ್ದರಾದರು? ಅಶ್ರಫ್ ಘನಿ ಯಾಕಾಗಿ ದೇಶ ತೊರೆದರು?    ಹುಟ್ಟಿ ಬೆಳೆದ ದೇಶವನ್ನೇ ತೊರೆಯಲು ಯಾಕಾಗಿ ಅಲ್ಲಿಯ ಪ್ರಜೆಗಳು ಸಿದ್ದರಾದರು. ? ಎಲ್ಲದಕ್ಕೂ ಕಾರಣ ಒಂದೇ. ತಾಲಿಬಾನಿಗಳ ಕ್ರೌರ್ಯ ಮತ್ತು ಕ್ರೂರತೆಯನ್ನು ಅನುಭವಿಸಿದ ಕಾರಣದಿಂದಾಗಿದೆ. 

1990 ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದ್ದ ತಾಲಿಬಾನಿಗಳ ಕೆಲವೊಂದು ಶರೀಅತ್ ನಿಯಮಗಳು ನೋಡಿ.

1. ಮಹಿಳೆಯರಿಗೆ  ಭೌತಿಕ ಶಿಕ್ಷಣದ ಅವಶ್ಯಕತೆಯಿಲ್ಲ.

2. ಮಹಿಳೆ ಮನೆಯಿಂದ ಹೊರಗಿಳಿಯಬಾರದು . ಅತ್ಯಾವಶ್ಯಕವಾದರೆ ಗಂಡನೊಂದಿಗೆ ಮಾತ್ರ ಹೊರಗಿಳಿಯಬಹುದು.

3.ಮಹಿಳೆ ಸಂಪೂರ್ಣವಾಗಿ ತನ್ನ ಶರೀರವನ್ನು ಮುಚ್ಚಿರಬೇಕು.

4. ಬಾಂಗ್ ಕೇಳಿದಾಕ್ಷಣ ಮಸೀದಿಗೆ ಹೊರಡಬೇಕು.

5. ಹರಾಂ ಆದ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ .

6. ಈ ನಿಯಮಗಳನ್ನು ಪಾಲಿಸದವನನ್ನು ಗುಂಡಿಕ್ಕಿ ಕೊಲ್ಲಲಾಗುವುದು.

ಈ ಶರೀಅತ್ ನಿಯಮಗಳು ಕಾಣುವಾಗ ಕಟ್ಟಾ ಸುನ್ನಿಗಳು ಎಂಬ ಭಾವನೆ ಮೂಡಿ  ಬರುತ್ತದೆಯಾದರೂ , ಇವುಗಳನ್ನು ಪಾಲಿಸದವರ ಮೇಲೆ ಇವರು ಮಾಡುವ ಕ್ರೌರ್ಯವು ಇವರ ನಿಜ ರೂಪವನ್ನು ಸಾಬೀತು ಪಡಿಸುತ್ತದೆ.

ಜಾಬಿರ್ ಹುಸೈನ್ ಜಾರಿಗೆಬೈಲು
(ಮುಹಿಮ್ಮಾತ್ ವಿದ್ಯಾರ್ಥಿ)


SHARE THIS

Author:

0 التعليقات: