Wednesday, 22 September 2021

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರತಿಭೋತ್ಸವ ನಿರ್ವಹಣಾ ಸಮಿತಿ ರಚನೆ


 ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರತಿಭೋತ್ಸವ ನಿರ್ವಹಣಾ ಸಮಿತಿ ರಚನೆ

 ಚೇರ್ ಮ್ಯಾನ್: ಹಾಫಿಳ್ ತೌಸೀಫ್ ಅಸ್ ಅದಿ, ಕನ್ವೀನರ್: ಮುಸ್ತಫಾ ಬುಡೋಳಿ  

ಮಾಣಿ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ SSF ವತಿಯಿಂದ 2 ವರ್ಷ ಕ್ಕೊಮ್ಮೆ ನಡೆಸಿಕೊಂಡು ಬರುವ ಪ್ರತಿಭೋತ್ಸವ, ಇದರ ಮಾಣಿ ಸೆಕ್ಟರ್ ನಿರ್ವಹಣಾ ಸಮಿತಿ ರಚನೆಯು ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಪೆರ್ನೆಯಲ್ಲಿ ನಡೆಯಿತು.  

 ಸಭೆಯನ್ನು SSF ಪುತ್ತೂರು ಡಿವಿಷನ್ ಅಧ್ಯಕ್ಷರಾದ ಹಾಫಿಳ್ ತೌಸೀಫ್ ಅಸ್ ಅದಿ ಉಸ್ತಾದರು ಉದ್ಘಾಟಿಸಿದರು.

ನಿರ್ವಹಣಾ ಸಮಿತಿ ಚೇರ್ ಮೇನ್ ಆಗಿ ಹಾಫಿಳ್ ತೌಸೀಫ್ ಅಸ್ ಅದಿ ವೈಸ್ಸ್ ಚೇರ್ ಮ್ಯಾನ್ ಆಗಿ ಜಮಾಲ್ ಝುಹ್ರಿ ನೇರಳಕಟ್ಟೆ, ಕನ್ವೀನರ್ ಆಗಿ ಮುಸ್ತಫಾ ಬುಡೋಳಿ, ವೈಸ್  ಕನ್ವೀನರ್ ಅಬ್ದುಲ್ ಅಝೀಝ್ ಸತ್ತಿಕ್ಕಲ್, ಫೈನಾನ್ಸ್ ಕಾರ್ಯದರ್ಶಿಗಳಾಗಿ ಕಲಂದರ್ ಪಾಟ್ರಕೋಡಿ, ಸಿನಾನ್ ಪೇರಮೊಗರು, ಮುಬಶ್ಶಿರ್ ಮುಸ್ಲಿಯಾರ್ ಸೂರಿಕುಮೇರ್ ಹಾಗೂ ಸದಸ್ಯರಾಗಿ ಲತೀಫ್ ಸಅದಿ ನೇರಳಕಟ್ಟೆ, ಮಿಕ್ದಾದ್ ನೇರಳಕಟ್ಟೆ, ಸಾಜಿದ್ ಪಾಟ್ರಕೋಡಿ, ಸಿದ್ದೀಕ್ ಪೆರ್ನೆ, ಸಾಬಿತ್ ಪಾಟ್ರಕೋಡಿ, ನುಉಮಾನ್ ಸತ್ತಿಕ್ಕಲ್, ಉಸೈದ್ ಮುಸ್ಲಿಯಾರ್ ಸೂರ್ಯ ಆಯ್ಕೆಯಾದರು. ಸಲಹಾ ಸಮಿತಿಯ ಚೇರ್ ಮ್ಯಾನ್ ಆಗಿ ಜಿ ಎಂ ಉಸ್ತಾದ್, ಕನ್ವೀನರ್ ಆಗಿ ಯಾಕೂಬ್ ಕೆಮ್ಮಣ್ ಹಾಗೂ ಸದಸ್ಯರಾಗಿ ಅಶ್ರಫ್ ಜಿ ಎಂ ಪೇರಮೊಗರು, ರಫೀಕ್ ಮದನಿ ಪಾಟ್ರಕೋಡಿ, ಯೂಸುಫ್ ಸಈದ್ ನೇರಳಕಟ್ಟೆ, ಅಝೀಝ್ B.M.K, ಶಫೀಕ್ ಪೆರ್ನೆಯವರನ್ನು  ಆರಿಸಲಾಯಿತು.

ಕಾರ್ಯಕ್ರಮದಲ್ಲಿ  SYS, SSF ನ ಹಲವಾರು ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

ಸೆಕ್ಟರ್ ದಅವಾ ಕಾರ್ಯದರ್ಶಿ ಮುಸ್ತಫಾ ಬುಡೋಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನೌಫಲ್ ಸತ್ತಿಕ್ಕಲ್ ಕೃತಜ್ಞತೆ ಸಲ್ಲಿಸಿದರು.


SHARE THIS

Author:

0 التعليقات: