Saturday, 18 September 2021

ಜನಸಾಗರ ಸಾಕ್ಷಿಯಾದ ಎಡಪ್ಪಾಲಂ ಮಹ್ಮೂದ್ ಮುಸ್ಲಿಯಾರ್ ರವರ ಅಂತಿಮ ಯಾತ್ರೆ


 ಜನಸಾಗರ ಸಾಕ್ಷಿಯಾದ ಎಡಪ್ಪಾಲಂ ಮಹ್ಮೂದ್ ಮುಸ್ಲಿಯಾರ್ ರವರ ಅಂತಿಮ ಯಾತ್ರೆ

ಕೊಡಗು : ನಿನ್ನೆ ಮರಣ ಹೊಂದಿದ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮ ಪ್ರಧಾನ ಕಾರ್ಯದರ್ಶಿಯೂ,  ಕೊಡಗು ಜಿಲ್ಲಾ ನಾಇಬ್ ಖಾಝಿಯೂ, ಪ್ರಮುಖ ವಿದ್ವಾಂಸರಾಗಿದ್ದ ಎಡಪ್ಪಾಲಂ ಮಹ್ಮೂದ್ ಮುಸ್ಲಿಯಾರ್ ರವರಿಗೆ  ಜನಸಾಗರ ಅಂತಿಮ ನಮನ ಸಲ್ಲಿಸಿತು. ಅವರ ಊರಾದ ಕೊಡಗು ಕಿಕ್ಕರ ಜಮಾಅತ್ ಮಸ್ಜಿದ್ ನಲ್ಲಿ ನಡೆದ ಮಯ್ಯಿತ್ ನಮಾಝಿಗೆ ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವ ವಹಿಸಿದರು. ಹಲವು ಸ್ಥಳಗಳಲ್ಲಿ ನಡೆದ ಮಯ್ಯಿತ್ ನಮಾಝಿಗೆ ಸಾವಿರಾರು ಮಂದಿ ಭಾಗವಹಿಸಿದರು.

ಇತ್ತೀಚೆಗೆ ತೀವ್ರವಾದ ಅನಾರೋಗ್ಯಕ್ಕಿಡಾದ ಅವರು ನಿನ್ನೆ ಮಧ್ಯಾಹ್ನ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

1944 ಆಗಿತ್ತು ಅವರ ಜನನ.  ತಂದೆ ಅಬ್ದುಲ್ ಖಾದರ್ ಮುಸ್ಲಿಯಾರ್,  ತಾಯಿ ಅಸ್ಮಾಬಿ,  ಹುಟ್ಟೂರಾಗಿರುವ ಕುಪ್ಪದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ, ಕೊಂಡಂಗೇರಿ, ತಿರುವಟ್ಟೂರ್ ಮುಂತಾದ ಹಲವಾರು ಸ್ಥಳಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಎನ್ ಅಬ್ದುಲ್ಲಾ ಮುಸ್ಲಿಯಾರ್ ಪಟ್ಟುವಂ, ಅವರಾನ್ ಕುಟ್ಟಿ ಮುಸ್ಲಿಯಾರ್  ತಲಕಡತ್ತೂರ್, ಕೆ ಅಬ್ದುಲ್ಲಾ ಮುಸ್ಲಿಯಾರ್ ಕುಟ್ಟಿಪ್ಪುರಂ, ಸಿ.ಪಿ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್ ತಿರುವಟ್ಟೂರ್, ಇಬ್ರಾಹೀಂ ಕುಟ್ಟಿ ಮುಸ್ಲಿಯಾರ್ ಮುಂತಾದವರು ಅವರ ಪ್ರಮುಖ ಗುರುಗಳಾಗಿದ್ದರು.

 ನಾಪೊಕ್ಲು, ಎಡಪ್ಪಾಲಂ, ಮೂರ್ನಾಡ್, ವಿರಾಜಪೇಟೆ, ಎಮ್ಮೆಮ್ಮಾಡು, ಮೈಸೂರು, ಮುಂತಾದ ಸ್ಥಳಗಳಲ್ಲಿ ಮುದರ್ರಿಸ್ ಮತ್ತು ಖತೀಬ್ ಆಗಿ ಸೇವೆ ಸಲ್ಲಿಸಿದರು.


SHARE THIS

Author:

0 التعليقات: