Friday, 10 September 2021

ಕಾಬೂಲ್ ಏರ್ಪೋರ್ಟ್ ಹೆಸರು ಬದಲಾವಣೆ ಮಾಡಿದ ತಾಲಿಬಾನ್!

ಕಾಬೂಲ್ ಏರ್ಪೋರ್ಟ್ ಹೆಸರು ಬದಲಾವಣೆ ಮಾಡಿದ ತಾಲಿಬಾನ್!

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಬೆನ್ನಲ್ಲೇ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಏರ್​ಪೋರ್ಟ್ ಹೆಸರನ್ನು ಬದಲಾವಣೆ ಮಾಡಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣಕ್ಕೆ ಇದ್ದ ಹಮೀದ್ ಕರ್ಜಾಯ್​ ಹೆಸರನ್ನು ಬದಲಿಸಿದ ತಾಲಿಬಾನ್​ ಸರ್ಕಾರ ಅದನ್ನು ಕಾಬೂಲ್ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ ಎಂದು ಬದಲಾವಣೆ ಮಾಡಿಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಹವಣಿಸುತ್ತಿರುವ ತಾಲಿಬಾನ್ ಸೆ.11ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ಘೋಷಿಸಿತ್ತು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಅಲ್ ​ಖೈದಾ ಉಗ್ರರು ದಾಳಿ ನಡೆಸಿದ ದಿನದಂದು ಅಫ್ಘಾನಿಸ್ತಾನದಲ್ಲಿ ತನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ತರುವುದು ತಾಲಿಬಾನ್​ ಉದ್ದೇಶವಾಗಿತ್ತು. ಆದರೆ ಅಧಿಕಾರ ಸ್ವೀಕಾರ ಸಮಾರಂಭವನ್ನು ಮುಂದೂಡಲಾಗಿದೆ ಎನ್ನಲಾಗಿದೆ.


SHARE THIS

Author:

0 التعليقات: