ಉ.ಪ್ರ ಚುನಾವಣಾ ಮೇಲ್ವಿಚಾರಣೆಗೆ ಶೋಭಾ ಕರಂದ್ಲಾಜೆ ಸಹಿತ ಐವರು ಸಚಿವರನ್ನು ನೇಮಿಸಿದ ಬಿಜೆಪಿ
ಹೊಸದಿಲ್ಲಿ: ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಚುನಾವಣಾ ತಯಾರಿ ಮೇಲ್ವಿಚಾರಣೆಗಾಗಿ ತನ್ನ ಪ್ರಮುಖ ನಾಯಕರನ್ನು ಆಯ್ಕೆ ಮಾಡಿದೆ. ಐವರು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಅನ್ನಪ್ರಾಣಾ ದೇವಿ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಅತ್ಯಂತ ನಿರ್ಣಾಯಕವಾಗಿರುವ ಉತ್ತರ ಪ್ರದೇಶದ ಮೇಲ್ವಿಚಾರಣೆ ವಹಿಸಲಾಗಿದೆ. ರೈತರ ಭಾರೀ ಪ್ರತಿಭಟನೆಯ ನಡುವೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಹರ್ಯಾಣದ ಮಾಜಿ ಸಚಿವ ಕ್ಯಾಪ್ಟನ್ ಅಭಿಮನ್ಯು ಹಾಗೂ ರಾಜ್ಯಸಭಾ ಸಂಸದ ಸರೋಜ್ ಪಾಂಡೆ ಕೂಡ ಉತ್ತರಪ್ರದೇಶ ರಾಜ್ಯದಲ್ಲಿ ನಿಯೋಜಿಸಲಾಗಿರುವ ಇತರ ನಾಯಕರಲ್ಲಿ ಸೇರಿದ್ದಾರೆ.
ಉತ್ತರಪ್ರದೇಶದಲ್ಲಿ ಪ್ರಮುಖ ನೇಮಕಾತಿಗಳನ್ನು ಮಾಡುವಾಗ ಪ್ರಾದೇಶಿಕವಾಗಿ ನಿಯೋಜನೆ ಕೂಡ ಕೇಂದ್ರೀಕೃತವಾಗಿದೆ. ಲೋಕಸಭಾ ಸಂಸದ ಸಂಜೀವ್ ಭಾಟಿಯಾ ಪಶ್ಚಿಮ ಯುಪಿಯನ್ನು ನೋಡಿಕೊಳ್ಳಲಿದ್ದಾರೆ. ರಾಷ್ಟ್ರೀಯ ಉಪ ಖಜಾಂಚಿ ಸುಧೀರ್ ಗುಪ್ತಾ ಅವರು ಕಾನ್ಪುರದಲ್ಲಿ ಚುನಾವಣಾ ಸಿದ್ಧತೆಯನ್ನು ನೋಡಿಕೊಳ್ಳಲಿದ್ದಾರೆ ಹಾಗೂ ಗೋರಖ್ಪುರಕ್ಕೆ ಅರವಿಂದ ಮೆನನ್ ಉಸ್ತುವಾರಿ ವಹಿಸಲಿದ್ದಾರೆ.
ಪಂಜಾಬ್,ಗೋವಾ,ಮಣಿಪುರ ಹಾಗೂ ಉತ್ತರಾಖಂಡ ರಾಜ್ಯಗಳಿಗೂ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಇಲ್ಲಿಯೂ ಕೂಡ ಕೆಲವು ಕೇಂದ್ರ ಸಚಿವರು ಗಳನ್ನು ನೇಮಿಸಿದೆ.
0 التعليقات: