ಹಣ ಅಕ್ರಮ ವರ್ಗಾವಣೆ ಪ್ರಕರಣ: ಈ.ಡಿ.ಯಿಂದ ರಾಜೀವ್ ಸಕ್ಸೇನಾ ಬಂಧನ
ಹೊಸದಿಲ್ಲಿ, ಸೆ. 13: ಬ್ಯಾಂಕ್ ವಂಚನೆ ಹಗರಣದೊಂದಿಗೆ ನಂಟು ಹೊಂದಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ 3,600 ಕೋಟಿ ರೂಪಾಯಿ ವಿವಿಐಪಿ ಹೆಲಿಕಪ್ಟಾರ್ ಒಪ್ಪಂದ ಪ್ರಕರಣದ ಆರೋಪಿಯಾಗಿರುವ ರಾಜೀವ್ ಸಕ್ಸೇನ ಅವರನ್ನು ಜಾರಿ ನಿರ್ದೇಶನಾಲಯ (ಈ.ಡಿ.) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3,600 ಕೋಟಿ ರೂಪಾಯಿಯ ವಿವಿಐಪಿ ಕಾಪ್ಟರ್ ಒಪ್ಪಂದ ಹಗರಣದಲ್ಲಿ ಸಕ್ಸೇನ ಪ್ರಧಾನ ಆರೋಪಿ. ಕಾಪ್ಟರ್ ಒಪ್ಪಂದ ಪ್ರಕರಣದಲ್ಲಿ ಸಕ್ಸೇನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಒಪ್ಪಂದ ದಲ್ಲಿ ಲಂಚ ಪಾವತಿಸಿರುವ ಬಗ್ಗೆ ಆರೋಪಗಳು ಕೇಳಿಬಂದ ಬಳಿಕ 2014ರಲ್ಲಿ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು. ದುಬೈಯಲ್ಲಿ ವಾಸಿಸುತ್ತಿದ್ದ ಸಕ್ಸೇನ ಅವರನ್ನು ಯುಎಇ 2019 ಜನವರಿ 31ರಂದು ಭಾರತಕ್ಕೆ ಗಡಿಪಾರು ಮಾಡಿತ್ತು ಜಾರಿ ನಿರ್ದೇಶನಾಲಯ ಈಗ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿ.
0 التعليقات: