Sunday, 19 September 2021

ಪಾಲಾ ಬಿಷಪ್ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ


 ಪಾಲಾ ಬಿಷಪ್ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ

ಕಲ್ಲಿಕೋಟೆ/ಕ್ಯಾಲಿಕಟ್: ಲೌ ಜಿಹಾದ್ ಅಥವಾ ಇನ್ನೊಂದು ಜಿಹಾದ್, ಇಂತಹದೊಂದೂ ಇಸ್ಲಾಂ ಧರ್ಮದಲ್ಲಿ ಇಲ್ಲ ಎಂದು ಭಾರತೀಯ ಮುಸಲ್ಮಾನರ ಅಧಿಕೃತ ಶಬ್ದ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮರ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು. ಮುಸ್ಲಿಂ ಸಮುದಾಯ ಅದಕ್ಕೆ ಆಹ್ವಾನ ಮಾಡಿಲ್ಲ , ಇನ್ನು ಕೂಡ ಹಾಗೆ ಮಾಡುವುದಿಲ್ಲ. ಪಾಲಾ ಬಿಷಪ್ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು. ಅದನ್ನು ಚರ್ಚೆ ಮಾಡಲು ಯಾರು ಕೂಡ ಮುಂದೆ ಬರಬಾರದು. ನಾವಿಲ್ಲಿ ಸಮಾಧಾನ ಬಯಸುತ್ತೇವೆ. ಭಿನ್ನತೆ ಉಂಟು ಮಾಡಿ ಕಳಹ ಉಂಟು ಮಾಡಲು ಆಸಕ್ತಿ ಇಲ್ಲ.  ಬಿಷಪ್ ಹೇಳಿದ್ದು ತಪ್ಪು. ಮಧ್ಯಸ್ಥಿಕೆ ಅಗತ್ಯವಿಲ್ಲ. ಮುಸ್ಲಿಂ ಸಮುದಾಯದ ವಿರುದ್ಧ ತಪ್ಪಾದ ವಾದ ಮಾಡಿದ ವ್ಯಕ್ತಿ ಅದನ್ನು ಹಿಂಪಡೆಯಬೇಕು. ಇದಕ್ಕಾಗಿ ಯಾರು ಬಂದರೂ ಸಮಾಧಾನಕರ ಆಗಿದೆ. 

ಬಲವಂತದ ಮತಾಂತರವನ್ನು ಇಸ್ಲಾಂ ಅನುಮತಿಸುವುದಿಲ್ಲ. ಲೌ ಜಿಹಾದ್ ಇಲ್ಲ ಎಂದು ಸ್ಪಷ್ಟವಾದಾಗ ನಾರ್ಕೋಟಿಕ್ ಜಿಹಾದ್ ಎಂದು ಹೊಸ ಹೆಸರು ಎಳೆದು ತರಲಾಗುತ್ತಿದೆ. ಈ ಹೆಸರಿನಿಂದ ಯಾವುದೇ ಪ್ರಯೋಜನ ಇಲ್ಲ. ಮುಸ್ಲಿಂ ಸಮುದಾಯ ಒಮ್ಮೆಯೂ ಭಯೋತ್ಪಾದನೆ ಅಥವಾ ಉಗ್ರವಾದದ ಪರವಾಗಿಲ್ಲ. ನಾವು ಯಾವಾಗಲೂ ಅದರ ವಿರುದ್ಧ ಮಾತನಾಡುವವರಾಗಿದ್ದೇವೆ ಎಂದೂ ತಪ್ಪು ಮಾಡುವ ಜನರು ಎಲ್ಲಾ ಧರ್ಮಗಳಲ್ಲೂ ಇರಬಹುದು ಎಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಹೇಳಿದರು. 

ಬಲದಿಂದ ಅಥವಾ ವಂಚನೆಯಿಂದ ಮತಾಂತರ ಮಾಡುವುದನ್ನು ಇಸ್ಲಾಂ ಧರ್ಮ ಕಲಿಸಿಲ್ಲ. ಇಷ್ಟ ಇರುವವರಿಗೆ  ಬರಬಹುದು ಮತ್ತು ಇಲ್ಲದವರು ಹೋಗಬಹುದು ಎಂಬುದು ನಿಲುವು. ಒಬ್ಬ ಇಸ್ಲಾಂ ಧರ್ಮಕ್ಕೆ ಬರುವಾಗ  ಮೊದಲು  ಹೇಳಿ ಕೊಡುವ ಮಾತುಗಳು ‘ಮನಸ್ಸಿನಲ್ಲಿ ದೃಢ ಮಾಡಿಕೊಂಡು ನಾಲಗೆಯಿಂದ ಹೇಳಬೇಕು’  ಎಂದು ಅವರು ಹೇಳಿದರು .


SHARE THIS

Author:

0 التعليقات: