ಶೂಟಿಂಗ್ ನಲ್ಲಿ ಭಾರತದ ಮನೀಶ್ ಗೆ ಚಿನ್ನ, ಸಿಂಗರಾಜ್ ಗೆ ಬೆಳ್ಳಿ ಪದಕ
ಟೋಕಿಯೊ : ಟೋಕಿಯೊದಲ್ಲಿ ಪ್ಯಾರಾಲಿಂಪಿಕ್ಸ್ನಲ್ಲಿ (Tokyo Paralympics) ಭಾರತಕ್ಕೆ ಮತ್ತೆ ಎರಡು ಪದಕಗಳು ಚಿನ್ನ ಸಿಕ್ಕಿದ್ದು, P4 ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನ ಮತ್ತು ಸಿಂಗ್ರಾಜ್ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.
ನಡೆದ ಸೆಮಿ ಫೈನಲ್ನಲ್ಲಿ ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಮನೀಶ್ 533-7x ಮತ್ತು ಸಿಂಗರಾಜ್ 536-4x ಅಂಕಗಳೊಂದಿಗೆ ಫೈನಲ್ ಗೇರಿದ್ದರು. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.
ಇತ್ತ ಬ್ಯಾಡ್ಮಿಂಟನ್ ಪುರುಷರ ಎಸ್ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್ಗೆ ಎಂಟ್ರಿಕೊಟ್ಟಿದ್ದಾರೆ. ಪುರುಷರ ಸಿಂಗಲ್ಸ್ ಎಸ್ ಎಲ್ 3 ಸೆಮಿ ಫೈನಲ್ ಪಂದ್ಯದಲ್ಲಿ ಪ್ರಮೋದ ಭಗತ್ ಜಪಾನ್ ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.
0 التعليقات: