Friday, 24 September 2021

ಪ್ರಭೋದನೆಗೆ ಸೂಕ್ತ ಸ್ಥಳವಾಗಿದೆ ಭಾರತ; ಶೈಖುನಾ ಬಾದುಶ ಸಖಾಫಿ ಉಸ್ತಾದ್


 ಪ್ರಭೋದನೆಗೆ ಸೂಕ್ತ ಸ್ಥಳವಾಗಿದೆ ಭಾರತ;  ಶೈಖುನಾ ಬಾದುಶ ಸಖಾಫಿ ಉಸ್ತಾದ್

ಮಂಗಳೂರು: ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್ ನಲ್ಲಿ ನಡೆದ ಕರ್ನಾಟಕ ಹಾಶಿಮಿ ಸಂಗಮದ ಉದ್ಘಾಟನೆ ಭಾಷಣದಲ್ಲಿ ಎಲ್ಲಾ ಅರ್ಥದಲ್ಲೂ  ಪ್ರಭೋದನೆಗೆ ಸೂಕ್ತವಾದ ಸ್ಥಳ‌ವಾಗಿದೆ ಭಾರತ. ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಭೋದನೆಯ ಅನಿವಾರ್ಯತೆ ಇದೆಯೆಂದು  ಜಾಮಿಅ ಹಾಶಿಮಿಯ್ಯ ಸಂಸ್ಥೆಯ ಪ್ರ.ಕಾರ್ಯದರ್ಶಿ ಶೈಖುನಾ ಪಿ.ಕೆ ಬಾದುಶ ಸಖಾಫಿ ಉಸ್ತಾದ್ ಅಭಿಪ್ರಾಯ ಪಟ್ಟರು.

ಧಾರ್ಮಿಕವಾಗಿ ತೀರ ಹಿಂದುಳಿದ ಪ್ರದೇಶಗಳಲ್ಲಿ ಕರ್ನಾಟಕ ಹಾಶಿಮಗಳ ತಂಡವೊಂದು ಯಾವುದೇ ಸಂಸ್ಥೆಯೊಂದಿಗೆ ಪೈಪೋಟಿ ನಡೆಸದೆ ಎಲ್ಲಾ ಉಲಮಾ ನಾಯಕರ ಸಲಹೆ ಪಡೆದು ಹಾಶಿಮಿಯ್ಯ ಕರ್ನಾಟಕ ಸಂಸ್ಥೆಯನ್ನು ನಡೆಸಬೇಕು ಎಂದು ನಿರ್ದೇಶಿಸಿದರು.

ಕರ್ನಾಟಕ ಹಾಶಿಮಿ ಸಾರಥಿಗಳನ್ನು ಇದೇ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.

ಅಧ್ಯಕ್ಷರಾಗಿ ಸಯ್ಯಿದ್ ಶಿಹಾಬುದ್ದೀನ್ ಹಾದಿ ಅಲ್ ಹಾಶಿಮಿ ಕರ್ವೇಲ್, ಪ್ರ.ಕಾರ್ಯದರ್ಶಿಯಾಗಿ ಟಿಪ್ಪು ಸುಲ್ತಾನ್ ಹಾಶಿಮಿ ಅಳಕೆ ಕೋಶಾಧಿಕಾರಿಯಾಗಿ ಶರೀಫ್ ಹಾಶಿಮಿ ಬನಾರಿ ಆಯ್ಕೆಯಾದರು.
SHARE THIS

Author:

0 التعليقات: