Monday, 20 September 2021

ಸಮ್ಮಿಶ್ರ ಸರ್ಕಾರ ಅವರದ್ದು ಮಾತ್ರ ಅಲ್ಲ ನಮ್ಮದೂ ಆಗಿತ್ತು: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು


 ಸಮ್ಮಿಶ್ರ ಸರ್ಕಾರ ಅವರದ್ದು ಮಾತ್ರ ಅಲ್ಲ ನಮ್ಮದೂ ಆಗಿತ್ತು: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: 'ಏಳು‌‌ ಕಿಲೋ‌‌ ಅಕ್ಕಿಗೆ ಬಜೆಟ್‌ನಲ್ಲಿ ದುಡ್ಡು ಇಟ್ಟಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ಆರೋಪ ನಿರಾಧಾರವಾಗಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಈ ಕುರಿತು ಸರಣಿ  ಟ್ವೀಟ್ ಗಳನ್ನು ಮಾಡಿರುವ ಅವರು ''ಬಜೆಟ್ ನಲ್ಲಿ ನೀಡಿದ ದುಡ್ಡು ಕಡಿಮೆಯಾದರೆ ಪೂರಕ ಬಜೆಟ್ ನಲ್ಲಿ ನೀಡುವುದು ಸಂಪ್ರದಾಯ. ಅದನ್ನೇ ಅವರು ಕೊಟ್ಟಿದ್ದಾರೆ. ಆಡಳಿತ ಒಂದು ನಿರಂತರ ಪ್ರಕ್ರಿಯೆ' ಎಂದು ಹೇಳಿದ್ದಾರೆ. 

'ಏಳು ಕಿಲೋ ಅಕ್ಕಿ ಹೊಸ ಘೋಷಣೆ ಆಗಿರಲಿಲ್ಲ, ಹಿಂದಿನ ಎರಡು ವರ್ಷ ಕೂಡಾ ಕೊಟ್ಟಿದ್ದೆವು. ಅದನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಿದೆ. ಅದು ಎಚ್ ಡಿ ಕುಮಾರಸ್ವಾಮಿ ಅವರು ಕೈಯಿಂದ ಕೊಟ್ಟದ್ದಲ್ಲ, ಮುಖ್ಯಮಂತ್ರಿಯಾಗಿ ಕೊಟ್ಟದ್ದು. ಸಮ್ಮಿಶ್ರ ಸರ್ಕಾರ ನಮ್ಮದೂ ಆಗಿತ್ತು' ಎಂದು ವಾಗ್ದಾಳಿ ನಡೆಸಿದ್ದಾರೆ. 

''ನಾನು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಕೇವಲ ಘೋಷಣೆ ಮಾಡಿದ್ದಲ್ಲದೆ ಏಳು‌‌ ಕಿಲೋ‌‌ ಅಕ್ಕಿಗೆ ಬಜೆಟ್‌ನಲ್ಲಿ ದುಡ್ಡು ಇಟ್ಟಿಲ್ಲ'' ಎಂದು ಸದನದಲ್ಲಿ ಚರ್ಚೆ ವೇಳೆ ಆರೋಪ ಮಾಡಿದ್ದರು. 


SHARE THIS

Author:

0 التعليقات: