ಮರ ಬಿದ್ದು ಚಾರ್ಮಾಡಿ ರಸ್ತೆ ಸಂಚಾರಕ್ಕೆ ತಡೆ
ಬೆಳ್ತಂಗಡಿ: ನಿರಂತರ ಮಳೆಯಾಗುತ್ತಿರುವ ಪರಿಣಾಮ ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ಆರಂಭದಲ್ಲಿ ಮರ ಬಿದ್ದು ಗುರುವಾರ ರಸ್ತೆ ತಡೆ ಉಂಟಾಗಿದೆ.
ರಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ಮರ ತೆರವುಗೊಳಿಸುವ ಕಾರ್ಯ ನಡೆಯಿತು.
ಚಾರ್ಮಾಡಿ ಘಾಟ್ ಮುಂಜಾನೆ ಅತೀ ಹೆಚ್ಚಿನ ವಾಹನಗಳು ಸಂಚರಿಸುವುದರಿಂದ ಎರಡು ಕಡೆ ರಸ್ತೆ ತಡೆ ಉಂಟಾಯಿತು.
ಮುಂಜಾನೆ 8.45 ರ ಸುಮಾರಿಗೆ ಮರ ಬಿದ್ದಿದ್ದು, ಇದೀಗ ತೆರವು ಕಾರ್ಯ ಯಶಸ್ವಿಯಾಗಿದೆ. ಸುಮಾರು 100 ಕ್ಕೂ ಅಧಿಕ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿತ್ತು. ಚಾರ್ಮಾಡಿ ಹಸನಬ್ಬ ಸಹಿತ ಹಲವು ಸಮಾಜ ಸೇವಕರು ತಕ್ಷಣ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು.
0 التعليقات: