Monday, 13 September 2021

ಪ್ರತ್ಯೇಕವಾದಿ ನಾಯಕ ಸೈಯದ್‌ ಅಲಿ ಶಾ ಗೀಲಾನಿ ಅಂತ್ಯಕ್ರಿಯೆಯ ಸಂಪೂರ್ಣ ವಿವರ ಸಲ್ಲಿಸುವಂತೆ ಕೇಂದ್ರ ಸೂಚನೆ


 ಪ್ರತ್ಯೇಕವಾದಿ ನಾಯಕ ಸೈಯದ್‌ ಅಲಿ ಶಾ ಗೀಲಾನಿ ಅಂತ್ಯಕ್ರಿಯೆಯ ಸಂಪೂರ್ಣ ವಿವರ ಸಲ್ಲಿಸುವಂತೆ ಕೇಂದ್ರ ಸೂಚನೆ

ಸೆಪ್ಟೆಂಬರ್ 1 ರಂದು ನಿಧನರಾದ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ಅಂತ್ಯಕ್ರಿಯೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿವರವಾದ ವರದಿಯನ್ನು ಕೇಳಿದೆ ಎಂದು thehindu ರವಿವಾರ ವರದಿ ಮಾಡಿದೆ. 

ಗೀಲಾನಿಯವರ ಅಂತ್ಯಕ್ರಿಯೆಯು ಭಾರೀ ಪೊಲೀಸ್‌ ಬಂದೋಬಸ್ತ್‌ ನೊಂದಿಗೆ ಶ್ರೀನಗರದ ಹೈದರ್ಪೋರಾ ಪ್ರದೇಶದಲ್ಲಿ ನಡೆದಿತ್ತು. ಆದರೆ ಪೊಲೀಸರು ಅವರ ಮೃತದೇಹವನ್ನು ಬಲವಂತವಾಗಿ ಪಡೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. 

ಸೆಪ್ಟೆಂಬರ್‌ ೬ರಂದು ಅವರ ಅಂತಿ ವಿಧಿವಿಧಾನಗಳನ್ನು ಧಾರ್ಮಿಕ ನಿಯಮಗಳ ಅನುಸಾರವಾಗಿ ನಡೆಸಿದ ವೀಡಿಯೊ ಸರಣಿಯನ್ನೂ ಜಮ್ಮುಕಾಶ್ಮೀರ ಪೊಲೀಸ್‌ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು. ಧಾರ್ಮಿಕ ವಿಧಿಗಳನ್ನು ಅನುಸರಿಸದೇ ಅವರ ಅಂತ್ಯಕ್ರಿಯೆ ಮಾಡಲಾಗಿದೆ ಎಂಬ ಆರೋಗಳು ಕೇಳಿ ಬಂದ ಬಳಿಕ ಈ ವೀಡಿಯೊಗಳನ್ನು ಪ್ರಕಟಿಸಲಾಗಿತ್ತು. ಇದೀಗ ಈ ಎಲ್ಲಾ ಘಟನೆಗಳ ಕುರಿತು ಸಂಪೂರ್ಣ ವಿವರ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.


SHARE THIS

Author:

0 التعليقات: