Friday, 3 September 2021

ಎರಡು ಪದಕಗಳನ್ನು ಮುಡಿಗೆರಿಸಿಕೊಂಡ ಭಾರತದ ಪ್ರಥಮ ಮಹಿಳೆ ಅವನಿ ಲೇಖರ್ ಗೆ ಪ್ರಶಂಸೆಗಳ ಸುರಿಮಳೆ


ಎರಡು ಪದಕಗಳನ್ನು ಮುಡಿಗೆರಿಸಿಕೊಂಡ ಭಾರತದ ಪ್ರಥಮ ಮಹಿಳೆ ಅವನಿ ಲೇಖರ್ ಗೆ ಪ್ರಶಂಸೆಗಳ ಸುರಿಮಳೆ

ನ್ಯೂಸ್ ಡೆಸ್ಕ್ : ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ 10 ಮೀಟರ್ ಏರ್ ರೈಫಲ್ ನಲ್ಲಿ ಸ್ವರ್ಣ ಪದಕ ಗೆದ್ದ ಬೀಗಿರುವ 19 ವರ್ಷದ ಅವನಿ ಲೇಖರ್ ಗೆ ಮತ್ತೊಂದು ಗರಿ ಮೂಡಿದೆ. 50 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.

ಆಕೆಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯಾತಿಗಣ್ಯರು 19 ವರ್ಷದ ಅವನಿ ಸಾಧನೆಯನ್ನು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿರವರು ಚಿನ್ನದ ಬಳಿಕ ಕಂಚಿನ ಪದಕ ಗೆದ್ದಿರುವ ಅವನಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದರ ಜೊತೆಗೆ ಇತರೇ ಸ್ಪರ್ಧಿಗಳಿಗೂ ಮೋದಿ ಶುಭ ಕೋರಿದ್ದಾರೆ. ಇದೇ ವೇಳೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಅವನಿಗೆ ಶುಭ ಹಾರೈಸಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿರುವುದು ಶ್ಲಾಘನೀಯ ಮತ್ತು ಹಲವಾರು ಜನರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಬಣ್ಣಿಸಿದ್ದಾರೆ. 


SHARE THIS

Author:

0 التعليقات: