Wednesday, 22 September 2021

ಬಾಗಲಕೋಟೆ: ಜಮಾಅತೇ ಅಹ್ಲುಸುನ್ನತ್ ವತಿಯಿಂದ ಮದರಸ ಏ ಖಾದ್ರೀಯ್ಯಾಕ್ಕೆ ಚಾಲನೆ


 ಬಾಗಲಕೋಟೆ:  ಜಮಾಅತೇ ಅಹ್ಲುಸುನ್ನತ್ ವತಿಯಿಂದ  ಮದರಸ ಏ ಖಾದ್ರೀಯ್ಯಾಕ್ಕೆ ಚಾಲನೆ 

ಬಾಗಲಕೋಟೆ: ಬಿಜಾಪುರದ ಪ್ರಮುಖ ವಿದ್ವಾಂಸ ಹಝ್ರತ್ ಸಯ್ಯಿದ್ ತನ್ವೀರ್ ಹಾಶಿಮ್ ಪೀರ್ ರವರ ನಾಯಕತ್ವದಲ್ಲಿ ನಡೆಯುವ ಮದರಸ ಏ ಖಾದ್ರೀಯ್ಯಾ ಜಮಾಅತೇ ಅಹ್ಲುಸುನ್ನತ್ ನ ಬಾಗಲಕೋಟೆ ಶಾಖೆಯನ್ನು ಖಾರೀ ಸಮೀಉಲ್ಲಾ ರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಇಸ್ಲಾಂ ಧರ್ಮದ ಸರಿಯಾದ ಆಶಯಗಳನ್ನು ತಿಳಿಯಲು ಒಂದು ಮದರಸ ಮತ್ತು ವಿಶಾಲವಾದ ಲೈಬ್ರರಿಯನ್ನು ತೆರೆಯಲಾಗಿದೆ ಎಂದು ತಿಳಿದು ಬಂದಿದೆ. 

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಖಾರಿ ಸಮೀಉಲ್ಲಾ ಖಾದ್ರಿ, ಉಪಾಧ್ಯಾಯರಾಗಿರುವ ಎಂ.ಕೆ ಮುಜಾಲೆ, ಕಾರ್ಯದರ್ಶಿ ಅಯ್ಯೂಬ್ ಭಾಗ್ಯವಾಡಿ, ಕೋಶಾಧಿಕಾರಿ ಅಬ್ದುಲ್ ಸತ್ತಾರ್, ಸದಸ್ಯರಾಗಿರುವ ರಿಯಾಝ್ ಅಹ್ಮದ್ ಜಿಸ್ತಿ, ಅಕ್ಬರ್ ಮುಲ್ಲಾ, ರಫೀಕ್ ಕಂದಗಳ, ಹಾಶಿಮಾ, ಹಿಂಮ್ರತ್ ಹವಾಲೆ, ಬಾಬಾಜನ್ ಭೀಪಾರಿ, ಯೂನುಸ್ ಭಾಯಿ ಇಲಕ್ಕಲ್, ಶರೀಫ್ ಮುಲ್ಲಾ, ಮುಹಮ್ಮದ್ ಶಾಫಿ ಪೀರ್ ಝ್ಯಾಡೆ ಅಮೀನ್ ಗಡ ಮುಂತಾದ ಅನೇಕ ಗಣ್ಯರು ಭಾಗವಹಿಸಿದರು.  

ವರದಿ: ಅಬ್ದುರ್ರಝಾಕ್ ಅಮೀನ್ ಗಡ
SHARE THIS

Author:

0 التعليقات: