Thursday, 9 September 2021

ಎರಡು ಬೈಕ್ ಮಧ್ಯೆ ಡಿಕ್ಕಿ: ಮೂವರು ಸಾವು

ಎರಡು ಬೈಕ್ ಮಧ್ಯೆ ಡಿಕ್ಕಿ: ಮೂವರು ಸಾವು

ಕಮಲಾಪುರ (ಕಲಬುರ್ಗಿ ಜಿಲ್ಲೆ): ಬೈಕ್‌ಗಳ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಸವಾರರು ಮೃತಪಟ್ಟ ಘಟನೆ ತಾಲ್ಲೂಕಿನ ಮಡಕಿ ತಾಂಡಾ ಬಳಿ ಗಣೇಶ ಹಬ್ಬದ ಮುನ್ನಾ ದಿನವಾದ ಗುರುವಾರ ನಡೆದಿದೆ.

ಲಾಡಮುಗಳಿ ಗ್ರಾಮದ ಅಂಬರೀಶ ಅಶೋಕ ಛತ್ರಿ (24) ಅನೀಲ (ಪಿಂಟು) ಮಲ್ಲಯ್ಯ ಗುತ್ತೇದಾರ (26) ಹಾಗೂ ಕಲಬುರ್ಗಿ ಸಮೀಪದ ಬೇಲೂರ ಕ್ರಾಸ್ ನಿವಾಸಿ ನಾಗೇಶ ಅಣ್ಣಪ್ಪ ವಡ್ಡರ (24) ಮೃತಪಟ್ಟಿದ್ದಾರೆ. ಇದೇ ಗ್ರಾಮದ ನಾಗೇಶ ಮುಕುಂದ (28) ತೀವ್ರಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮಹಾಗಾಂವ ಕ್ರಾಸ್‌ಗೆ ತೆರಳಿದ್ದ ಅಂಬರೀಶ ಹಾಗೂ ಅನೀಲ ಬೈಕ್ ಮೂಲಕ ಸ್ವಗ್ರಾಮ ಲಾಡ ಮುಗಳಿಗೆ ಮರಳುತ್ತಿದ್ದರು.ವಿ.ಕೆ. ಸಲಗರಗೆ ತೆರಳಿದ್ದ ಬೇಲೂರ ಕ್ರಾಸ್ ನಿವಾಸಿಗಳಾದ ನಾಗೇಶ ವಡ್ಡರ ಹಾಗೂ ನಾಗೇಶ ಮುಕುಂದ ಬೇಲೂರ ಕ್ರಾಸ್ ಗೆ ಮರಳುತ್ತಿದ್ದರು. ಮಧ್ಯೆ ಮಡಕಿ ತಾಂಡಾ ಬಳಿ ಡಿಕ್ಕಿ ಸಂಭವಿಸಿದೆ.

ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.SHARE THIS

Author:

0 التعليقات: