Monday, 13 September 2021

ಈಶ್ವರಪ್ಪನಿಗೂ ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್‍ಶಿಪ್: ಸಿದ್ದರಾಮಯ್ಯ

 

ಈಶ್ವರಪ್ಪನಿಗೂ ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್‍ಶಿಪ್: ಸಿದ್ದರಾಮಯ್ಯ 

ಬೆಂಗಳೂರು: `ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸಚಿವ ಕೆ.ಎಸ್.ಈಶ್ವರಪ್ಪಗೂ ಮತ್ತು ನನಗೂ ಸ್ನೇಹ ಮತ್ತು ವೈರತ್ವ(ಲವ್ ಆಂಡ್ ಹೇಟ್) ಸಂಬಂಧವಿದೆ. ಅವರ ಮೇಲೆ ನನಗೆ ಪ್ರೀತಿಯು ಇದೆ. ದ್ವೇಷವೂ ಇದೆ. ಅದು ರಾಜಕೀಯವಾಗಿ. ವೈಯಕ್ತಿಕವಾಗಿ ಏನೂ ಇಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, `ನೀವು ಪೇಪರ್ ಅಡ್ಡ ಹಿಡಿದುಕೊಂಡು ಮಾತನಾಡಿದರೆ, ನಮಗೆ ಸರಿಯಾಗಿ ಕೇಳುವುದಿಲ್ಲ' ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ನಾನು ಮಾತನಾಡುತ್ತಿರುವುದು ನಿಮಗೆ ಸರಿಯಾಗಿ ಕೇಳಿಸುತ್ತಿದೆಯಲ್ಲವೇ?' ಎಂದು ಸ್ಪೀಕರ್ ಕಾಗೇರಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಕಾಗೇರಿ ಅವರು `ಚೆನ್ನಾಗಿ ಕೇಳಿಸುತ್ತಿದೆ' ಎಂದರು. `ನಮಗೂ ನಿಮಗೂ ಅಡ್ಜಸ್ಟ್ಮೆಂಟ್ ಏನು ಇಲ್ಲ ಅಲ್ವಾ? ಪರಸ್ಪರ ಗೌರವ ಇದೆ ಅಷ್ಟೇ' ಎಂದರು.

`ನಿಮ್ಮ ಮಾತು ಸಚಿವ ಕೆ.ಎಸ್.ಈಶ್ವರಪ್ಪಗೆ ಸರಿಯಾಗಿ ಕೇಳಿಸುತ್ತಿಲ್ಲವಂತೆ. ಅವರ ಮೇಲೆ ಏನಾದರೂ ಸಿಟ್ಟಿದೆಯೇ? ಎಂದು ಕಾಗೇರಿ, ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, `ಈಶ್ವರಪ್ಪಗೂ ನನಗೂ ಲವ್ ಆಂಡ್ ಹೇಟ್ ಫ್ರೆಂಡ್‍ಶೀಪ್. ಅವರೊಂದಿಗೆ ನನಗೆ ವೈರನೂ ಇದೆ, ಸ್ನೇಹವೂ ಇದೆ. ಆದರೆ ರಾಜಕೀಯವಾಗಿ ಅಷ್ಟೇ. ಅವರಿಗೂ ನನಗೂ ವೈಯಕ್ತಿಕ ಏನೂ ಇಲ್ಲ' ಎಂದು ಸ್ಪಷ್ಟಣೆ ನೀಡಿದರು.


SHARE THIS

Author:

0 التعليقات: