Wednesday, 22 September 2021

ಎಸ್.ಎಂ.ಎ.ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ

ಎಸ್.ಎಂ.ಎ.ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ

ಅಧ್ಯಕ್ಷರಾಗಿ ಮನ್ಸೂರು ಕೋಡಿ, ಪ್ರ.ಕಾರ್ಯದರ್ಶಿಯಾಗಿ ಕೊಂಬಾಳಿ ಝುಹುರಿ ಆಯ್ಕೆ

ಉಡುಪಿ: ರಾಜ್ಯ ವ್ಯಾಪ್ತಿಯ ಮಸೀದಿ ಹಾಗೂ ಮದ್ರಸಗಳ ಆಡಳಿತ ಸಮಿತಿಯ ಸದಸ್ಯರು ಹಾಗೂ ಅಲ್ಲಿನ ಧಾರ್ಮಿಕ ಅದ್ಯಾಪಕರನ್ನು ಒಳಗೊಂಡ ಸಮಿತಿಯಾಗಿದೆ ಸುನ್ನೀ ಮ್ಯಾನೇಜ್'ಮೆಂಟ್ ಅಸೋಸಿಯೇಷನ್ (ಎಸ್.ಎಂ.ಎ). ಇದರ ಉಡುಪಿ ಜಿಲ್ಲೆಯ 2018-2021ನೇ ಸಾಲಿನ ವಾರ್ಷಿಕ ಮಹಾಸಭೆಯು ಕಾಪು ಜೆ. ಸಿ. ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಜಿಲ್ಲಾಧ್ಯಕ್ಷರಾದ ಮನ್ಸೂರು ಕೋಡಿಯವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಸಭೆಯನ್ನು ರಾಜ್ಯ ಉಪಾಧ್ಯಕ್ಷರಾದ ಕೆ.ಕೆ.ಎಂ ಕಾಮಿಲ್ ಸಖಾಫಿ ಸುರಿಬೈಲು ಉದ್ಘಾಟಿಸಿ, ಸಂಘಟನೆ ಧ್ಯೇಯ ಮತ್ತು ಗುರಿಯ ಬಗ್ಗೆ ವಿವರಣೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಅಬ್ದುರ್ರಹೀಂ ಹೊಸ್ಮಾರು ವಾರ್ಷಿಕ ವರದಿ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜೆಪ್ಪು ಅಬ್ದುರ್ರಹ್ಮಾನ್ ಮದನಿಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. 

2021-24ನೇ ಸಾಲಿಗೆ ಅಧ್ಯಕ್ಷರಾಗಿ ಮನ್ಸೂರು ಕೋಡಿ, ಪ್ರ.ಕಾರ್ಯದರ್ಶಿಯಾಗಿ ಕೊಂಬಾಳಿ ಕೆ.ಎಂ.ಎಚ್ ಝುಹುರಿ, ಕೋಯನಗರ, ಕೋಶಾಧಿಕಾರಿಯಾಗಿ ಬಾವಾ ಹಾಜಿ ಮೂಳೂರು, ಉಪಾಧ್ಯಕ್ಷರುಗಳಾಗಿ ಅಬೂಬಕರ್ ಮುಸ್ಲಿಯಾರ್ ಕನ್ನಂಗಾರು, ಅಬ್ದುಲ್ಲತೀಫ್ ಸಾಣೂರು, ಖಲಂದರ್ ಸಿಟಿ ಕುಂದಾಪುರ, ಉಸ್ಮಾನ್ ಮದನಿ ನೇಜಾರು, ಕಾರ್ಯದರ್ಶಿಗಳಾಗಿ ಎನ್.ಸಿ. ಅಬ್ದುರ್ರಹೀಂ ಹೊಸ್ಮಾರು, ಎಸ್.ಎಂ. ಹನೀಫ್ ಸಅದಿ ನಾವುಂದ, ಅಯ್ಯೂಬ್ ಮಾಣಿಕೊಳಲು,ಅಬ್ದುಲ್ಲತೀಫ್ ಸಅದಿ ಮೂಳೂರು, ಕಾರ್ಯಕಾರಿ ಸದಸ್ಯರಾಗಿ ಯೂಸುಫ್ ಮಾವಿನಕಟ್ಟೆ, ಅಶ್ರಫ್ ಮುಸ್ಲಿಯಾರ್ ಹಂಗಳೂರು, ಇಬ್ರಾಹಿಂ ಸಖಾಫಿ ಕಟಪಾಡಿ, ಹುಸೈನ್ ಕೋಟ, ಅಬ್ದುರ್ರಹ್ಮಾನ್ ಐಡಿಯಲ್, ಸುಲೈಮಾನ್ ಹಾಜಿ ಬಜಗೋಳಿ, ಅಬ್ದುರ್ರಶೀದ್ ಸಖಾಫಿ ಮಜೂರು, ಮೊಯಿದೀನ್ ಹಾಜಿ ಗುಡ್ವಿಲ್, ಅಬ್ದುಲ್ ಬಾರಿ ಮುಸ್ಲಿಯಾರ್, ಅಬ್ದುಲ್ ಮಜೀದ್ ಹನೀಫಿ ಕಾಪು ಎಂಬವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಸಖಾಫಿ ಮಜೂರು ಸ್ವಾಗತಿಸಿ, ಕೊಂಬಾಳಿ ಝುಹುರಿ ವಂದಿಸಿದರು.SHARE THIS

Author:

0 التعليقات: