Wednesday, 22 September 2021

ತಡರಾತ್ರಿ ಪತ್ನಿ, ಮಗಳ ಹತ್ಯೆ


ತಡರಾತ್ರಿ ಪತ್ನಿ, ಮಗಳ ಹತ್ಯೆ

ಕಲಬುರಗಿ: ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ತಡರಾತ್ರಿ ಪತ್ನಿ ಮತ್ತು ಮಗಳನ್ನು ದಿಗಂಬರ್ ಎಂಬಾತ ಹತ್ಯೆ ಮಾಡಿದ್ದಾನೆ.

ಜಗದೀಶ್ವರಿ(45), ಪ್ರಿಯಾಂಕಾ(11) ಮೃತಪಟ್ಟವರು ಎಂದು ಹೇಳಲಾಗಿದೆ. ಅವರನ್ನು ದಿಗಂಬರ್ ಹತ್ಯೆ ಮಾಡಿದ್ದು ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಕಾರಣ ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.SHARE THIS

Author:

0 التعليقات: