Monday, 13 September 2021

ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮಂಗಳೂರಿನ ರುತ್ ದೇಶಕ್ಕೇ ಫಸ್ಟ್ ರ‍್ಯಾಂಕ್

ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮಂಗಳೂರಿನ ರುತ್ ದೇಶಕ್ಕೇ ಫಸ್ಟ್ ರ‍್ಯಾಂಕ್

ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮಂಗಳೂರಿನ ರುತ್ ಕ್ಲಾರ್ ಡಿಸಿಲ್ವ ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ.

ಮಂಗಳೂರಿನ ರಫರ್ಟ್ ಡಿಸಿಲ್ವ ಮತ್ತು ರೋಸಿ ಮಾರಿಯಾ ಡಿಸಿಲ್ವಾ ದಂಪತಿ ಪುತ್ರಿಯಾಗಿರುವ ರುತ್ ಈ ಬಾರಿ ಸಿಎ ಪರೀಕ್ಷೆ ಕಷ್ಟವಾಗಿತ್ತು. ಉತ್ತಮವಾಗಿ ಪರೀಕ್ಷೆ ಬರೆದಿದ್ದ ನಾನು ರ್ಯಾಂಕ್ ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಅವರ ಸಾಧನೆಗೆ ಮಾರ್ಗದರ್ಶಕರು, ಸ್ನೇಹಿತರು ಅಭಿನಂದಿಸಿದ್ದಾರೆ.

ಶಾಲಾ ದಿನಗಳಿಂದಲೂ, ನನ್ನ ನೆಚ್ಚಿನ ವಿಷಯವೆಂದರೆ ಅಕೌಂಟೆನ್ಸಿ. ದೂರಶಿಕ್ಷಣದಿಂದ ಬಿಕಾಂ (ಆನರ್ಸ್) ಪದವಿಪಡೆದು ಸಿಎ ಪರೀಕ್ಷೆಗೆ ತಯಾರಿ ಆರಂಭಿಸಿದ್ದೆ ಎಂದು ಟಾಪರ್ ರುತ್ ಹೇಳಿದ್ದಾರೆ.SHARE THIS

Author:

0 التعليقات: