ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ನಿಧನ
ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಬುಧವಾರ ಶ್ರೀನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಗೀಲಾನಿ ಅವರು 1990 ರಿಂದ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿ ಚಳುವಳಿಯನ್ನು ಮುನ್ನಡೆಸಿದ್ದರು, ಹುರಿಯತ್ನ ಆಜೀವ ಅಧ್ಯಕ್ಷರಾಗಿದ್ದರು.
ತೀವ್ರವಾದಿ ಬಣದ ನಾಯಕ ಗೀಲಾನಿ ಕಳೆದ ವರ್ಷ ರಾಜಕೀಯ ಹಾಗೂ ಹುರಿಯತ್ ಸಂಘಟನೆಗೆ ರಾಜೀನಾಮೆ ನೀಡಿದ್ದರು.
0 التعليقات: