Wednesday, 22 September 2021

ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ: ಹೊಂಡಕ್ಕೆ ಬಿದ್ದ ಬಸ್, 6 ವಲಸೆ ಕಾರ್ಮಿಕರು ಸಾವು

ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ: ಹೊಂಡಕ್ಕೆ ಬಿದ್ದ ಬಸ್, 6 ವಲಸೆ ಕಾರ್ಮಿಕರು ಸಾವು

ರಾಯ್​ಗಂಜ್​ : ರಾಯ್ ಗಂಜ್ ನ ರೂಫಹಾರ್ ನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಆರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬಸ್ ಜಾರ್ಖಂಡ್ ನ ಪಾಕುರ್ ನಿಂದ ಉತ್ತರ ಪ್ರದೇಶದ ಲಕ್ನೋಗೆ ವಲಸೆ ಕಾರ್ಮಿಕರೊಂದಿಗೆ ಹೋಗುತ್ತಿತ್ತು.

ರಾಯ್ ಗಂಜ್ ನ ರೂಫಹಾರ್ ನಲ್ಲಿ ರಾತ್ರಿ 10:45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ಗುಂಡಿಗೆ ಬಿದ್ದಿತು. ಬಸ್ ಚಾಲಕ ಕುಡಿದಿದ್ದಾನೆ ಎಂದು ಬಸ್ ಪ್ರಯಾಣಿಕರು ಆರೋಪಿಸಿದ್ದಾರೆ. ತಲೆಮರೆಸಿಕೊಂಡಿರುವ ಬಸ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.SHARE THIS

Author:

0 التعليقات: