ಜಪಾನ್, ರಷ್ಯಾದಲ್ಲಿ ಪ್ರಬಲ ಭೂಕಂಪನ :
ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು
ಜಪಾನ್ : ಜಪಾನ್ ನಲ್ಲಿ ತಡರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
ಜಪಾನ್ನಲ್ಲಿ ಇಂದು ತಡರಾತ್ರಿ 1:55ರಸುಮಾರಿಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ. ಭೂಕಂಪವು ಟೋಕಿಯೋದಿಂದ 1,593 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಸೋಮವಾರ ರಾತ್ರಿ 8.30 ರ ಸುಮಾರಿಗೆ ರಷ್ಯಾದ ಕುರಿಲ್ ಐಲ್ಯಾಂಡ್ನಲ್ಲಿ 6.1ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ರಷ್ಯಾದಿಂದ 3,268 ಕಿ.ಮೀ ದೂರದಲ್ಲಿರುವ ಕುರಿಲ್ ಐಲ್ಯಾಂಡ್ನಲ್ಲಿ ಸುಮಾರು 38 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ.
0 التعليقات: