Friday, 3 September 2021

ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಉಗ್ರನ ಅಟ್ಟಹಾಸ : ಚೂರಿ ಇರಿದು 6 ಮಂದಿಯ ಕೊಲೆ

 

ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಉಗ್ರನ ಅಟ್ಟಹಾಸ : ಚೂರಿ ಇರಿದು 6 ಮಂದಿಯ ಕೊಲೆ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ಆಕ್ಲೆಂಡ್‌ ಸೂಪರ್‌ ಮಾರ್ಕೆಟ್‌ನಲ್ಲಿ ಉಗ್ರನೊಬ್ಬ ಶುಕ್ರವಾರ ಅಟ್ಟಹಾಸ ಮೆರೆದಿದ್ದು, ಚಾಕು ಇರಿದು ಆರು ಜನರನ್ನು ಕೊಲೆ ಮಾಡಿರುವುದಾಗಿ ವರದಿಯಾಗಿದೆ.

ಸುದ್ದಿ ತಿಳಿದು ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಆತನನ್ನು ಹತ್ಯೆ ಮಾಡಿದ್ದಾರೆ. ಕೌಂಟ್‌ಡೌನ್‌ ಸೂಪರ್‌ ಮಾರ್ಕೆಟ್‌ ಗೆ ತೆರಳಿದ ಉಗ್ರನು ಅಲ್ಲಿಂದಲೇ ಚಾಕು ತೆಗೆದುಕೊಂಡಿದ್ದು, ಆರು ಜನರನ್ನು ಇರಿದು ಕೊಂಡಿದ್ದಾನೆ. ತಡೆಯಲು ಹೋದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

ಈ ಕುರಿತು ಮಾಹಿತಿ ನೀಡಿದ ಪ್ರಧಾನಿ ಜಸಿಂಡಾ ಅರ್ಡೆರ್ನ್‌ 'ಇದೊಂದು ಭಯೋತ್ಪಾದಕ ದಾಳಿಯಾಗಿದೆ. ಉಗ್ರ ಶ್ರೀಲಂಕಾ ನಾಗರಿಕನಾಗಿದ್ದು, ಐಸಿಸ್‌ ಉಗ್ರ ಸಂಘಟನೆಯಿಂದ ಪ್ರಚೋದನೆಗೊಳಗಾಗಿ ದಾಳಿ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.SHARE THIS

Author:

0 التعليقات: