Thursday, 16 September 2021

57 ಅನಾಥ ಮಕ್ಕಳಿಗೆ ಸಹಾಯ ತಲುಪಿಸಿ , ಮತ್ತೊಮ್ಮೆ ಮುಹಿಮ್ಮಾತ್ ಸಾಂತ್ವನ


 57 ಅನಾಥ ಮಕ್ಕಳಿಗೆ ಸಹಾಯ ತಲುಪಿಸಿ , ಮತ್ತೊಮ್ಮೆ ಮುಹಿಮ್ಮಾತ್ ಸಾಂತ್ವನ

ಮಿತ್ತೂರ್: ಹೋರ್ಫನ್ ಹೋಮ್ ಕೆಯರ್ ಪದ್ಧತಿಯ ಮೂಲಕ 57 ಯತೀಂ ಮಕ್ಕಳಿಗೆ ಸಹಾಯ ತಲುಪಿಸಿ ಎರಡನೇ ಹಂತದ ಮುಹಿಮ್ಮಾತ್ ಸಾಂತ್ವನ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಹಾಯ ವಿತರಣೆ ಮಾಡಲಾಯಿತು. ಕಾಸರಗೋಡು ಜಿಲ್ಲೆಯ 165 ಅನಾಥ ಮಕ್ಕಳಿಗೆ ಕಳೆದ ತಿಂಗಳು ಒಂದನೇ ಹಂತದ ಸಹಾಯ ವಿತರಣೆ ಮಾಡಲಾಗಿತ್ತು. ಅನಾಥ ಮಕ್ಕಳನ್ನು ಅವರ ಸ್ವಂತ ಮನೆಗಳಲ್ಲಿಯೇ ಸಂರಕ್ಷಿಸುವ ಮುಹಿಮ್ಮಾತ್ ಹೋಮ್ ಕೆಯರ್ ಸ್ಕೀಮ್ ನಲ್ಲಿ ರೆಜಿಸ್ಟರ್ ಮಾಡಿದವರಿಗೆ ಪ್ರತಿ ತಿಂಗಳು 1500 ರೂ ನೀಡಲಾಗುತ್ತಿದೆ. ಇದೀಗ ನೂರಾರು ಜನರಿಗೆ ಇದರ ಪ್ರಯೋಜನ ದೊರಕಿದೆ. ಒಂದು ವರ್ಷದ ಕೆಳಗಿನ ಪುಟ್ಟ ಮಕ್ಕಳಿಂದ ಹಿಡಿದು ಹನ್ನೆರಡು ವರ್ಷ ವಯಸ್ಸಿನ ಮಕ್ಕಳ ವರೆಗಿನ ಹಲವು ಮಕ್ಕಳಿಗೆ ಇದರ ಸಹಾಯ ದೊರೆಯುತ್ತಿದೆ.

 ಮಿತ್ತೂರ್ ದಾರುಲ್ ಇರ್ಶಾದ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದವನ್ನು ಮುಹಿಮ್ಮಾತ್ ಜನರಲ್ ಸೆಕ್ರೆಟರಿ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಉದ್ಘಾಟಿಸಿದರು. ಮುಹಿಮ್ಮಾತ್ ಕೇಂದ್ರ ಕಮಿಟಿ ಸದಸ್ಯರು ಅಡ್ವಕೆಟ್ ಶಾಕಿರ್ ಹಾಜಿ ಮಿತ್ತೂರ್ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಅಝೀಝ್ ಮಿಸ್ಬಾಹಿ ಮುಖ್ಯ ಪ್ರಭಾಷಣ ಮಾಡಿದರು. ಮುಸ್ತಫ ಸಖಾಫಿ ಭಾಷಣ ಮಾಡಿದರು. ಮುಹಿಮ್ಮಾತ್ ಸಾಂತ್ವನ ಕಮಿಟಿ ಕನ್ವೀನರ್ ಮೂಸ ಸಖಾಫಿ ಕಳತ್ತೂರ್ ಸ್ವಾಗತ ಮತ್ತು ಸಿದ್ದೀಖ್ ಅಹ್ಸನಿ ಕೃತಜ್ಞತೆ ಸಲ್ಲಿಸಿದರು.


SHARE THIS

Author:

0 التعليقات: