Friday, 24 September 2021

ಅಂಡಾಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆದಾಖಲು

ಅಂಡಾಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆದಾಖಲು

ಅಂಡಾಮಾನ್ : ಅಂಡಾಮಾನ್ ನಿಕೋಬಾರ್ ದ್ವೀಪಗಳ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ ನಿನ್ನೆ ರಾತ್ರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ತಿಳಿಸಿದೆ.

5.2 ತೀವ್ರತೆಯ ಭೂಕಂಪ, 24-09-2021, 20:34:27 ಸಮಯಕ್ಕೆ ಸಂಭವಿಸಿದ್ದು, ಐಎಸ್ ಟಿ, ಲ್ಯಾಟ್: 9.22 ಮತ್ತು ಉದ್ದ: 93.92, ಆಳ: 63 ಕಿ.ಮೀ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಉತ್ತರಕ್ಕೆ 246 ಕಿ.ಮೀ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಎನ್ ಸಿಎಸ್ ಟ್ವೀಟ್ ನಲ್ಲಿ ತಿಳಿಸಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಗಾಗ್ಗೆ ಭೂಕಂಪನ ಸಂಭವಿಸುತ್ತಿರುತ್ತದೆ. ಈ ಹಿಂದೆ ಸೆಪ್ಟೆಂಬರ್ 22 ರಂದು ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿತ್ತು.SHARE THIS

Author:

0 التعليقات: