Thursday, 30 September 2021

ಚಾಮರಾಜನಗರ: 4 ಕೆ.ಜಿ. ಗೂ ಅಧಿಕ ಪ್ರಮಾಣದ ಗಾಂಜಾ ವಶ, ಆರೋಪಿ ಸೆರೆ

 ಚಾಮರಾಜನಗರ: 4 ಕೆ.ಜಿ. ಗೂ ಅಧಿಕ ಪ್ರಮಾಣದ ಗಾಂಜಾ ವಶ, ಆರೋಪಿ ಸೆರೆ

ಚಾಮರಾಜನಗರ : ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, 4 ಕೆ.ಜಿ.ಗೂ ಅಧಿಕ ಪ್ರಮಾಣದ ಗಾಂಜಾ ವಶಪಡಿಸಿ ಕೊಳ್ಳುವಲ್ಲಿ ಚಾಮರಾಜನಗರ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪುಷ್ಪಾಪುರ ಗ್ರಾಮದ ಕಬ್ಬಾಲ (65) ಬಂಧಿತ ಆರೋಪಿಯಾಗಿದ್ದು, ಈತ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಗಾಂಜಾ ಸಂಗ್ರಹಣೆ ಮಾಡಿರುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.

ಮಾಹಿತಿಯನ್ವಯ ಅಬಕಾರಿ ಜಂಟಿ ಆಯುಕ್ತ ಮಾದೇಶ್, ಉಪಾಯುಕ್ತ ಮುರಳಿ ಅವರ ಸೂಚನೆ ಮೇರೆಗೆ ಅಬಕಾರಿ ಡಿವೈಎಸ್ಪಿ ಮೋಹನ್‍ ಕುಮಾರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ನಂದಿನಿ ಮತ್ತು ತಂಡ ಗುರುವಾರ ದಾಳಿ ನಡೆಸಿ ಆರೋಪಿ ಹಾಗು ಗಾಂಜಾವನ್ನು ವಶಪಡಿಸಿಕೊಂಡು ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಅಬಕಾರಿ ಇಲಾಖೆಯ ಇನ್ಸ್ ಪೆಕ್ಟರ್ ಮೀನಾ, ಮಣಿಕಂಠ, ಮಹೇಂದ್ರ, ಸೋಮಣ್ಣ, ವೀರತಪ್ಪ, ಸಿದ್ಧಯ್ಯ ಇನ್ನಿತರರು ಹಾಜರಿದ್ದರು.


SHARE THIS

Author:

0 التعليقات: