Friday, 3 September 2021

ಭಾರತದಲ್ಲಿಂದು 42,618 ಹೊಸ ಕೊರೊನಾ ಕೇಸ್ ಪತ್ತೆ, 330 ಮಂದಿ ಸಾವು

 

ಭಾರತದಲ್ಲಿಂದು 42,618 ಹೊಸ ಕೊರೊನಾ ಕೇಸ್ ಪತ್ತೆ, 330 ಮಂದಿ ಸಾವು

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 42,618 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 42,618 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,29,45,907 ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿನಿಂದ 330 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,40,225 ಕ್ಕೆ ಏರಿಕೆಯಾಗಿದೆ.

ಒಟ್ಟು ಪ್ರಕರಣಗಳು: 3,29,45,907

ಸಕ್ರಿಯ ಪ್ರಕರಣಗಳು: 4,05,681

ಒಟ್ಟು ಚೇತರಿಕೆಗಳು: 3,21,00,001

ಸಾವಿನ ಸಂಖ್ಯೆ: 4,40,225

ಒಟ್ಟು ಲಸಿಕೆ: 67,72,11,205 (ಕಳೆದ 24 ಗಂಟೆಗಳಲ್ಲಿ 58,85,687)



SHARE THIS

Author:

0 التعليقات: