Wednesday, 1 September 2021

40 ಲಕ್ಷ ಮೌಲ್ಯದ ಗಾಂಜಾ ವಶ: ಇಬ್ಬರ ಸೆರೆ


 40 ಲಕ್ಷ ಮೌಲ್ಯದ ಗಾಂಜಾ ವಶ: ಇಬ್ಬರ ಸೆರೆ

ದೇವನಹಳ್ಳಿ: ಈಶಾನ್ಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು ₹ 40 ಲಕ್ಷ ಮೌಲ್ಯದ 101 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸಚಿನ್ ಹಾಗೂ ಆಟೊ ಚಾಲಕ ಆನಂದ್ ಬಂಧಿತರು. ಮತ್ತೊಬ್ಬ ಆರೋಪಿ ಸಾಗರ್ ತಪ್ಪಿಸಿಕೊಂಡಿದ್ದಾನೆ. ಸಚಿನ್ ವಿದೇಶದಲ್ಲಿ ಓದಿದ್ದು ಪ್ರತಿಷ್ಠಿತ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಪಘಾತದಲ್ಲಿ ಕಾಲು ಮುರಿದುಕೊಂಡು ವಿಮೆಯಿಂದ ಬಂದ ಹಣವನ್ನು ಗಾಂಜಾ ಮಾರಾಟದ ಮೇಲೆ ಹೂಡಿಕೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರದ ವಿಶಾಖಪಟ್ಟಣಂನಿಂದ ಗಾಂಜಾ ತರಿಸಿ ಆನಂದ್ ಜೊತೆ ಸೇರಿ ಬಿಜಿನೆಸ್ ಆರಂಭಿಸಿದ್ದ. ನಂದಿಬೆಟ್ಟ ರಸ್ತೆ ಚಾಕಲೇಟ್ ಹೌಸ್ ಶಾಪ್ ಮುಂಭಾಗದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.

ಎಸಿಪಿ ಶ್ರೀನಿವಾಸ್, ಇನ್‌ಸ್ಪೆಕ್ಟರ್ ರಮೇಶ್, ಸಬ್ ಇನ್‌ಸ್ಪೆಕ್ಟರ್ ಶಿವಪ್ಪ ನಾಯ್ಕರ್, ಅಪರಾಧ ವಿಭಾಗದ ಸಂಕ್ರಪ್ಪ, ಹೆಡ್‌ ಕಾನ್‌ಸ್ಟೆಬಲ್‌ ಆನಂದ್, ಕಾನ್‌ಸ್ಟೆಬಲ್ ಇಸ್ಮಾಯಿಲ್, ರವಿ ಪಾಟೀಲ್, ತಯಾಬ್, ಲಾಜರ್, ವೆಂಕಟೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.SHARE THIS

Author:

0 التعليقات: