Monday, 13 September 2021

ಕೊರೊನಾ 3 ನೇ ಅಲೆ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರಲ್ಲ

 

ಕೊರೊನಾ 3 ನೇ ಅಲೆ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರಲ್ಲ 

ಚಂಡೀಗಢ್ ​: ದೇಶದ ಜನತೆಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು,ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಚಂಡಿಗಢ್​​ನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ ನಿರ್ದೇಶಕ ಡಾ. ಜಗತ್​ ರಾಮ್​ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ 3 ನೇ ಅಲೆ ಪ್ರಾರಂಭದಲ್ಲಿದ್ದು, ಈಗಾಗಲೇ ಅನೇಕ ಮಕ್ಕಳಲ್ಲಿ ಈಗಾಗಲೇ ಪ್ರತಿಕಾಯಗಳು ಉತ್ಪತ್ತಿಯಾಗಿವೆ. ಹಾಗಾಗಿ ಮೂರನೇ ಅಲೆ ಮಕ್ಕಳಿಗೆ ಮಾರಣಾಂತಿಕವಾಗಿ ಪರಿಣಮಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಚಂಡಿಗಢ್​​ನಲ್ಲಿ ಸುಮಾರು 2700 ಮಕ್ಕಳನ್ನು ಸರ್ವೇಯಲ್ಲಿ ಒಳಗೊಳ್ಳಲಾಗಿತ್ತು. ಈ ವೇಳೆ ಶೇ.71ರಷ್ಟು ಮಕ್ಕಳಲ್ಲಿ ಆಯಂಟಿಬಾಡಿ ಅಭಿವೃದ್ಧಿಯಾಗಿದ್ದು ಕಂಡುಬಂದಿದೆ. ಹಾಗಾಗಿ ಮಕ್ಕಳು ಮೂರನೇ ಅಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟವಾಗಿದೆ.


SHARE THIS

Author:

0 التعليقات: