ಕೆಮ್ಮಾಯಿ; ಎಸ್ ಎಸ್ ಎಫ್ 33ನೇ ಧ್ವಜ ದಿನ
SSF ಧ್ವಜ ದಿನದ ಅಂಗವಾಗಿ SSF ಕೆಮ್ಮಾಯಿ ಯುನಿಟ್ ವತಿಯಿಂದ ಕೆಮ್ಮಾಯಿ ಜಂಕ್ಷನ್ ಬಳಿ ಧ್ವಜ ದಿನ ಆಚರಿಸಲಾಯಿತು. SYS ಕೆಮ್ಮಾಯಿ ಯುನಿಟ್ ಇದರ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕೆಮ್ಮಾಯಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ನಂತರ SSF ಕೆಮ್ಮಾಯಿ ಇದರ ಅಧ್ಯಕ್ಷರಾದ ರಫೀಕ್ ಕೆಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಶಾದ್ ಕೆಮ್ಮಾಯಿ ಸ್ವಾಗತಿಸಿದರು, ಸಿನಾನ್ ಸಖಾಫಿ ಮುಖ್ಯ ಭಾಷಣ ಮಾಡಿದರು. SYS ಕೆಮ್ಮಾಯಿ ಅಧ್ಯಕ್ಷ ರಾದ ಅಬ್ದುಲ್ ರಹಿಮಾನ್ ಕೆಮ್ಮಾಯಿ ಹಾಗೂ ಜಿಲ್ಲಾ ಟೀಮ್ ಇಸಾಬ ಕಾರ್ಯದರ್ಶಿ ಯಾದ ಇಕ್ಬಾಲ್ ಬಪ್ಪಳಿಗೆ, ಸಾಂದರ್ಭಿಕ ಭಾಷಣ ಮಾಡಿದರು. ನುಹ್ಮಾನ್ ಕೆಮ್ಮಾಯಿ ಧನ್ಯವಾದ ಮಾಡಿದರು. ಟೀಂ ಇಸಾಬ ಕಾರ್ಯದರ್ಶಿ ಅಬ್ದುಲ್ ಅಝೀಝ್, SYS ಕೆಮ್ಮಾಯಿ ಇದರ ಖಜಾಂಜಿ ಯೂಸುಫ್ SES, SYS ಕೆಮ್ಮಾಯಿ ಸದಸ್ಯ ರಾದ ಫಳ್ಲುಚ್ಚ, ಅಬ್ದುಲ್ ಅಝೀಝ್ ಗಡಿಯಾರ ಹಾಗೂ SSF ಕೆಮ್ಮಾಯಿ ಸದಸ್ಯರು ಹಾಗೂ ಊರ ಹಿರಿಯರು ಉಪಸ್ಥಿತರಿದ್ದರು.
0 التعليقات: