ದಲಿತರ ಮಗು ದೇವಾಲಯ ಪ್ರವೇಶಿಸಿದ್ದಕ್ಕೆ 25 ಸಾವಿರ ರೂ. ದಂಡ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದಲ್ಲಿ ದಲಿತ ಕುಟುಂಬದ ಮಗು ದೇವಾಲಯ ಪ್ರವೇಶಿಸಿದ್ದಕ್ಕೆ ಪೋಷಕರಿಗೆ 25 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ದೇವಾಲಯ ಶುದ್ಧೀಕರಣಕ್ಕಾಗಿ 25 ಸಾವಿರ ರೂ. ಕೊಡಬೇಕೆಂದು ಕುಟುಂಬದವರಿಗೆ ತಾಕೀತು ಮಾಡಿದ್ದಾರೆ. ಮಿಯಾಪುರ ನಾಲ್ಕು ವರ್ಷದ ಮಗುವಿನ ಜನ್ಮದಿನದ ಹಿನ್ನೆಲೆಯಲ್ಲಿ ಅವರ ತಂದೆ ದೇವರ ದರ್ಶನಕ್ಕೆಂದು ಆಂಜನೇಯ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದು, ದಲಿತರಿಗೆ ಪ್ರವೇಶ ಇಲ್ಲದ ಕಾರಣ ಹೊರಗಿನಿಂದಲೇ ನಮಸ್ಕರಿಸಿ ತೆರಳಿದ್ದಾರೆ.
ಆದರೆ, ಬಾಲಕ ದೇವಾಲಯದೊಳಗೆ ಪ್ರವೇಶಿಸಿದ್ದಾನೆ. ಈ ಹಿನ್ನೆಲೆಯಲ್ಲಿ ದೇವಾಲಯ ಅಪವಿತ್ರವಾಗಿದೆ. ಹೋಮ, ಹವನ ಶುದ್ಧಿ ಕಾರ್ಯಗಳಿಗೆ ತಗಲುವ ವೆಚ್ಚ ಭರಿಸಲು 25 ಸಾವಿರ ರೂ. ಕೊಡಬೇಕೆಂದು ದಂಡ ಹಾಕಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮದವರೊಂದಿಗೆ ಸಭೆ ನಡೆಸಿದ್ದು, ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
0 التعليقات: