Sunday, 12 September 2021

ಟ್ವಿನ್ ಟವರ್ ಮೇಲಿನ ದಾಳಿಗೆ 20 ವರ್ಷ!

 

ಟ್ವಿನ್ ಟವರ್ ಮೇಲಿನ ದಾಳಿಗೆ 20 ವರ್ಷ! 

2001ರ ಸೆಪ್ಟೆಂಬರ್ 11ರಂದು 4ನೇ ವಿಮಾನ ಬಿದ್ದಿತ್ತಲ್ವಾ.. ಪೆನ್ಸಿಲ್ವೇನಿಯಾ.. ಅಲ್ಲಿಗೆ ನಿನ್ನೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಮತ್ತೊಮ್ಮೆ ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂತೆಗೆತದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅದೇ ಅಮೆರಿಕದ ಮೇಲೆ ದಾಳಿ ನಡೆಸಿದ್ದ ಉಗ್ರ ಸಂಘಟನೆ ಬಗ್ಗೆ ಪ್ರಶ್ನಿಸಿದಾಗ, ಆ ಸಂಘಟನೆ ಇರುವ ದೇಶಗಳಲ್ಲೆಲ್ಲಾ ಅಮೆರಿಕ ಅತಿಕ್ರಮಣ ಮಾಡಿ, ಸೇನೆಯನ್ನು ಇಡೋಕೆ ಆಗುತ್ತಾ ಅಂತ ಪ್ರಶ್ನಿಸಿದ್ದಾರೆ. ಜೊತೆಗೆ 2011ರಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಅಮೆರಿಕದಲ್ಲಿ ದಾಳಿಗೆ ಕಾರಣವಾದ ಉಗ್ರನನ್ನು ಹೊಡೆದು ಹಾಕಿದೀವಿ. ಈ ಮೂಲಕ ಅಮೆರಿಕ ತನ್ನ ಗುರಿಯನ್ನು ಸಾಧಿಸಿದೆ ಅಂತ ಹೇಳಿದ್ದಾರೆ. ಇನ್ನು ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂತೆಗೆತ ಪ್ರಕ್ರಿಯೆಯ ರೀತಿಗೆ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಿಂದ ತುಂಬಾ ಹಾನಿಯೊಂದಿಗೆ ಅಮೆರಿಕ ಹೊರಬಂದಿದೆ. ಇದು ದೇಶಕ್ಕೆ ತುಂಬಾ ದುಃಖದ ವಿಚಾರ ಅಂತ ಟ್ರಂಪ್​​ ಹೇಳಿದ್ದಾರೆ. ಇನ್ನು 2001ರ ದಾಳಿ ವೇಳೆ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಶ್ ಮಾತನಾಡಿ, ಅಮೆರಿಕದಲ್ಲಿ ಆಗ ಏಕತೆ ಇತ್ತು. ಆದ್ರೆ ಈಗ ಅದು ಕಡಿಮೆಯಾಗ್ತಿರೋದು ಆತಂಕಕಾರಿ ವಿಚಾರ ಅಂತ ಹೇಳಿದ್ದಾರೆ.



SHARE THIS

Author:

0 التعليقات: