Thursday, 9 September 2021

ಕೊಟ್ಟಿಗೆಗೆ ಬೆಂಕಿ: 20 ಕುರಿಗಳ ಸಜೀಹ ದಹನ

ಕೊಟ್ಟಿಗೆಗೆ ಬೆಂಕಿ: 20 ಕುರಿಗಳ ಸಜೀಹ ದಹನ

ಮಳವಳ್ಳಿ : ಕುರಿಗಳನ್ನು ಕೂಡಿ ಹಾಕಿದ್ದ ಗುಡಿಸಲಿನ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 20 ಕುರಿಗಳು ಸಜೀಹ ದಹನವಾಗಿರುವ ಘಟನೆ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಿದ್ದಪ್ಪ ಎಂಬುವರಿಗೆ ಸೇರಿದ ಈ ಕುರಿಗಳನ್ನು ರಾತ್ರಿ ಗುಡಿಸಲಿನ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು. ರಾತ್ರಿ ಆಕಸ್ಮಿಕವಾಗಿ ಗುಡಿಸಲಿನ ಕೊಟ್ಟಿಗೆಗೆ ಬೆಂಕಿ ಬಿದ್ದು ಕೊಟ್ಟಿಗೆಯಲ್ಲಿದ್ದ 20 ಕುರಿಗಳು ಸಜೀವ ದಹನವಾಗಿವೆ ಎಂದು ಅವರು ತಿಳಿಸಿದ್ದಾರೆ. ಕುರಿಗಳ ಸಾವಿನಿಂದ ಕಂಗಾಲಾದ ಅವರು ಪರಿಹಾರ ನೀಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

SHARE THIS

Author:

0 التعليقات: